ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ೮೯% ಕ್ಕೆ ಕುಸಿತ

ವಿಶ್ವಸಂಸ್ಥೆ: ಕೊರೊನಾ ಹಿನ್ನೆಯಲ್ಲಿ ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಏಪ್ರೀಲ್ ತಿಂಗಳಲ್ಲಿ ೮೯% ರಷ್ಟು ಕುಸಿದಿದೆ ಎಂದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ ಹೇಳಿದೆ. ಸೆಪ್ಟೆಂಬರ್ ವೇಳೆಗೆ ವಿಶ್ವದಲ್ಲಿ ವಿಮಾನದಲ್ಲಿ ಸಂಚರಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಪೈಕಿ ೧೦೨ ಕೋಟಿಯಷ್ಟು ಜನ ಕಡಿಮೆಯಾಗಬಹುದು ಎಂದು ಸಂಘಟನೆ ಅಂದಾಜಿಸಿದೆ. ಫೆಬ್ರುವರಿಯಲ್ಲಿ ಅಂತರರಾಷ್ಟ್ರೀಯ  ಪ್ರಯಾಣಿಕರ ಸಂಖ್ಯೆ ೧೩%ರಷ್ಟು ಕುಸಿತ ಕಂಡಿದೆ. ಚೀನಾ ಸೇರಿದಂತೆ ಮೊದಲು ಸೋಂಕು ಕಾಣಿಸಿಕೊಂಡ ದೇಶಗಳು ಅಂತರರಾಷ್ಟ್ರೀಯ  ವಿಮಾನಯಾನಗಳನ್ನು ರದ್ದುಗೊಳಿಸಿದ್ದು ಇದಕ್ಕೆ ಕಾರಣ. ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಿದ ಕಾರಣ ಮಾರ್ಚ್ನಲ್ಲಿ ಅಂತರರಾಷ್ಟ್ರೀಯ  ಪ್ರಯಾಣಿಕ ಸಂಖ್ಯೆ ೪೯% ರಷ್ಟು ಕುಸಿತವಾಗಿದೆ. ಏಪ್ರೀಲ್‌ನಲ್ಲಿ ಇದರ ಪ್ರಯಾಣ ೯೧%ಕ್ಕೆ ಏರಿಕೆಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಸಡಿಲಿಕೆ ದುರಂತಕ್ಕೆ ಆಹ್ವಾನ: ಎಚ್.ಕೆ. ಪಾಟೀಲ

Sat Apr 25 , 2020
ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯಂಥ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನ ಪರ ಇಲ್ಲ. ಇಂತಹ ನಿರ್ಣಯಗಳಿಂದ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ, ತಕ್ಷಣ ದುರಂತವನ್ನು ಆಹ್ವಾನಿಸುವ ನಿರ್ಣಯವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಎಚ್.ಕೆ ಪಾಟೀಲ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಅಂತ ತೀರ್ಮಾನ ಜನತೆಯ ಸರ್ವಾಂಗೀಣ ಹಿತವನ್ನೂ ಸಂಪೂರ್ಣವಾಗಿ ಪರಿಗಣಿಸಿ ಸರ್ವಸಮ್ಮತವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಬೇಕಾದುದ್ದು […]

Advertisement

Wordpress Social Share Plugin powered by Ultimatelysocial