ಅಕ್ಟೋಬರ್ನಲ್ಲಿ ಐ ಪಿ ಎಲ್ ನಡೆಸಿ ಎಂದ ಪ್ಯಾಟ್ ಕಮಿನ್ಸ್

ಕೋವಿಡ್-19 ವೈರಸ್ ಹಿನ್ನೆಲೆ ಈಗಾಗಲೇ ನಡೆಯಬೇಕಿದ್ದ ಐಪಿಎಲ್ ಕೂಟ ಮುಂದೂಡಿಕೆಯಾಗಿದೆ. ಮುಂದಿನ ಅಕ್ಟೋಬರ್ ತಿಂಳಲ್ಲಿನಲ್ಲಿ ಆಸೀಸ್ ನೆಲದಲ್ಲಿ ಟಿ20 ವಿಶ್ವಕಪ್ ಕೂಡಾ ನಡೆಯಲಿದೆ, ಟಿ20 ವಿಶ್ವಕಪ್ ಕೂಟ ನಡೆಸುವ ಬಗ್ಗೆ ಇಂದು ಐಸಿಸಿ ಸಭೆಯಲ್ಲಿ ಚರ್ಚೆಯಾಗಲಿದೆ. ಒಂದು ವೇಳೆ ಟಿ20 ವಿಶ್ವಕಪ್ ನಡೆಯದೇ ಇದ್ದ ಆ ಸಮಯದಲಲ್ಲಿ ಐಪಿಎಲ್ ನಡೆಸಬೇಕು ಎಂದು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ. ಹಾಗೇ ಟಿ20 ದಿಗ್ಗಜರೇ ಕೂಡುವ ಕೂಟವನ್ನು ಲಕ್ಷಾಂತರ ಜನರು ನೋಡುತ್ತಾರೆ. ಅದರಲ್ಲೂ ಇಷ್ಟು ದಿನ ಸ್ಥಗಿತಗೊಂಡಿದ್ದ ಕಾರಣ ಮುಂದಿನ ಐಪಿಎಲ್ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಕಮಿನ್ಸ್ ಹೇಳಿದ್ದಾರೆ. ಆದ್ದರಿಂದ ಐಪಿಎಲ್ ನಡೆದರೆ ಕ್ರಿಕೆಟ್ ಗೆ ಒಳ್ಳೆಯದು ಎಂದು ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುವ ಕಮಿನ್ಸ್ ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

  ಲಕ್ಷದ್ವೀಪದಲ್ಲೇ ಸಿಲುಕಿದ್ದ ಕಾರ್ಮಿಕರು

Thu May 28 , 2020
ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಎರಡುವರೆ ತಿಂಗಳಿನಿಂದ ಲಕ್ಷ ದ್ವೀಪದಲ್ಲಿ ಬಾಕಿಯಾಗಿದ್ದ 19 ಮಂದಿ ಕಾರ್ಮಿಕರನ್ನು ಇಂದು “ಅಮಿನ್ ದಿವಿ”  ಎಂಬ ಹೆಸರಿನ ಹಡಗಿನ ಮೂಲಕ ಲಕ್ಷದ್ವೀಪದಿಂದ ಮಂಗಳೂರಿನ ಹಳೇ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಹಡಗಿನಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಅರೋಗ್ಯ ತಪಾಸಣೆ ಒಳಪಡಿಸಿದ ನಂತರ, ಕಾರ್ಮಿಕರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇವರನ್ನು ಸ್ವಾಗತ ಕೋರಿ ಬರಮಾಡಿಕೊಂಡರು.   Please follow and like us:

Advertisement

Wordpress Social Share Plugin powered by Ultimatelysocial