ಅಜ್ಜಿ ಬಳಿ ಅಡುಗೆ ಕಲಿಯುತ್ತಿರುವ ನಟ ರಾಮ್ ಚರಣ್…!

ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯಲೇ ಕಾಲಕಳೆಯುವಂತಾಗಿದೆ. ಸಿನಿ ಸಲೆಬ್ರಿಟಿಗಳು ಸಹ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗುವ ಮೂಲಕ ಅಭಿಮಾನಿಗಳ ಜೊತೆ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. ಇತ್ತೀಚಿಗೆ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ರಿಯಲ್ ಮ್ಯಾನ್ ಚಾಲೆಂಜ್ ಒಂದಿಷ್ಟು ದಿನ ವೈರಲ್ ಆಗಿತ್ತು. ಟಾಲಿವುಡ್ ಸ್ಟಾರ್ ನಟರು ಮನೆಗೆಲಸ ಮಾಡಿ ಸವಾಲ್ ಸ್ವೀಕರಿಸಿ, ಮತ್ತೊಬ್ಬ ಸ್ಟಾರ್ ಗೆ ಚಾಲೆಂಜ್ ಮಾಡುತ್ತಿದ್ದರು. ರಾಮ್ ಚರಣ್, ಜೂ. ಎನ್ ಟಿ ಆರ್ ಸೇರಿದಂತೆ ಅನೇಕರು ಮನೆಗೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ರಾಮ್ ಚರಣ್ ಅಡುಗೆ ಕಲಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಜ್ಜಿಯ ಬಳಿ ಅಡುಗೆ ಮಾಡುವುದನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಅಜ್ಜಿ ಅಂಜನಾ ದೇವಿ ಮೊಮ್ಮಗನಿಗೆ ಮಜ್ಜಿಗೆ ಮಾಡುವುದನ್ನು ಕಲಿಸುತ್ತಿದ್ದಾರೆ. ಅಜ್ಜಿ ಹೇಳಿದ ಹಾಗೆ ರಾಮ್ ಚರಣ್ ಮಜ್ಜಿಗೆ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದ್ಹಾಗೆ ರಾಮ್ ಚರಣ್ ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಆರ್ ಆರ್ ಮುಗಿಯುತ್ತಿದ್ದಂತೆ ಆಚಾರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ವಿರುದ್ದ ಕ್ರಮಕ್ಕೆ ಕಾಂಗ್ರೆಸ್  ಒತ್ತಾಯ

Sat May 2 , 2020
ಬಿಜೆಪಿ ಶಾಸಕರು ಸರ್ಕಾರದ ಅನುದಾನದಲ್ಲಿ ಪೂರೈಸುವ ಆಹಾರ ಪೊಟ್ಟಣಗಳ ಮೇಲೆ ಭಾವಚಿತ್ರ ಹಾಗು ಪಕ್ಷದ ಚಿಹ್ನೆ ಮುದ್ರಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಸರ್ಕಾರದ ಅನುದಾನದಲ್ಲಿ ಪೂರೈಕೆ‌ ಮಾಡುವ ಆಹಾರ ಪೂರೈಕೆಯಲ್ಲಿ‌ ಈ ರೀತಿಯ ರಾಜಕೀಯ ಮಾಡಬಾರದು. ಸಿಎಂ ಕ್ರಮಕೈಗೊಳ್ಳಲು ಸೂಚಿಸದಿದ್ರೆ ಹೋರಾಟ ಅನಿವಾರ್ಯ. ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಪೌಷ್ಠಿಕ ಆಹಾರಗಳನ್ನು ಬಿಜೆಪಿ ಸಿಂಬಲ್​​ನಲ್ಲಿ ರೀ ಪ್ಯಾಕ್ […]

Advertisement

Wordpress Social Share Plugin powered by Ultimatelysocial