ಅಭಿಮಾನಿಗಳಿಗೆ ಶಾಕ್‌ ಕೊಟ್ಟ ರಿಯಲ್‌ ಸ್ಟಾರ್‌ ಉಪೇಂದ್ರ..!

ಇದೇ ಸೆಪ್ಟೆಂಬರ್ 18ರಂದು ರಿಯಲ್ ಸ್ಟಾರ್‌ ಉಪೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆ, ಈ ಬಾರಿ ಉಪೇಂದ್ರ ಅವರ ಜನ್ಮದಿನವನ್ನು ಬಹಳ ಅದ್ಧೂರಿಯಾಗಿ ಆಚರಿಸಬೇಕು ಅನ್ನೋದು ಅವರ ಅಭಿಮಾನಿಗಳ ಆಸೆಯಾಗಿತ್ತು. ಆದ್ರೆ, ಉಪೇಂದ್ರ ತಮ್ಮ ಫ್ಯಾನ್ಸ್‌ಗೆ ಶಾಕ್‌ ಕೊಟ್ಟು, ಒಂದು ಸರ್‌ಪ್ರೈಸ್‌ ಕೂಡ ಕೊಡುತ್ತಿದ್ದಾರೆ. ಹೌದು…ತಮ್ಮ ಯುಐ ಚಿತ್ರದ ಟೀಸರ್​ ಬಿಡುಗಡೆಗೆ ಉಪ್ಪಿ ಭರ್ಜರಿ ತಯಾರಿ ನಡೆಸಿದ್ದಾರೆ.

 

ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಇರುವ ಕಾರಣ ನಟ ಉಪೇಂದ್ರ ಅವರ ನಿರ್ದೇಶನದ ‘ಯುಐ’ ಸಿನಿಮಾದ ಟೀಸರ್ ಅಂದೇ ರಿಲೀಸ್ ಆಗಲಿದೆ. ಊರ್ವಶಿ ಥಿಯೇಟರ್‌​ನಲ್ಲಿ ಅಭಿಮಾನಿಗಳ ಜೊತೆ ಯುಐ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಈ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಅಭಿಮಾನಿ ದೇವರುಗಳಿಗೆ ಹುಟ್ಟುಹಬ್ಬದ ದಿನ ತಮ್ಮ ಮನೆ ಬಳಿ ಯಾರು ಬರದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

 

‘‘ಎಲ್ಲಾ ಅಭಿಮಾನಿಗಳಿಗೆ ನಮಸ್ಕಾರ. ಸೆಪ್ಟೆಂಬರ್ 18 ತುಂಬಾನೇ ವಿಶೇಷವಾದ ದಿನ. ಈ ವರ್ಷ ಗಣೇಶ ಚತುರ್ಥಿ ಬಂದಿದೆ. ನನ್ನ ಅಭಿಮಾನಿಗಳ ಹಬ್ಬ ಕೂಡ ಹೌದು. ಅದೇ ರೀತಿ ‘ಯುಐ’ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 17 ರಾತ್ರಿ ಅಥವಾ ಸೆಪ್ಟೆಂಬರ್ 18ರ ಬೆಳಿಗ್ಗೆ ಕತ್ರಿಗುಪ್ಪೆ ಮನೆಯಲ್ಲಾಗಲಿ ಸದಾಶಿವ ನಗರದ ಮನೆಯಲ್ಲಾಗಲಿ ಇರುವುದಿಲ್ಲ ನಾನು. ಸೆಪ್ಟೆಂಬರ್ 18ರಂದು ಮಧ್ಯಾಹ್ನ ಊರ್ವಶಿ ಥಿಯೇಟರ್ ಬಳಿ ಬನ್ನಿ. ಅಲ್ಲಿಯೇ ಕೇಕ್ ಕತ್ತರಿಸೋಣ. ಹುಟ್ಟುಹಬ್ಬ ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೆ ಆಚರಣೆ ಇರುತ್ತದೆ. ಸಂಜೆ 6:30ಕ್ಕೆ ಥಿಯೇಟರ್ ಒಳಗೆ ಟೀಸರ್ ಲಾಂಚ್​ ಮಾಡುತ್ತೇವೆʼ ಎಂದಿದ್ದಾರೆ ನಟ ಉಪೇಂದ್ರ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಆಂಧ್ರ: ತಿರುಪತಿಗೆ ತೆರಳುತ್ತಿದ್ದ ಕ್ರೂಸರ್ ಲಾರಿಗೆ ಡಿಕ್ಕಿ: ಐವರು ಸಾವು, 11 ಮಂದಿಗೆ ಗಾಯ

Fri Sep 15 , 2023
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ತಿರುಪತಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕ್ರೂಸರ್ ಶುಕ್ರವಾರ ಬೆಳಗ್ಗೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ… ಅನ್ನಮಯ: ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ತಿರುಪತಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕ್ರೂಸರ್ ಶುಕ್ರವಾರ ಬೆಳಗ್ಗೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು […]

Breaking News

Advertisement

Wordpress Social Share Plugin powered by Ultimatelysocial