ಅಮ್ಮನ ಪ್ರೀತಿ ಸಾರುವ ಕನ್ನಡ ಚಿತ್ರಗಳು

ಅಮ್ಮಾ ಅನ್ನೋ ಪದದಲ್ಲಿ ಸುಂದರವಾದ ಭಾವನೆ ಇದೆ. ಅಮ್ಮಾ ಅನ್ನೋ ಪದ ಹೇಳಲು ಅದೇನೋ ಹಿಗ್ಗು- ಸಂಭ್ರಮ, ಸಡಗರ, ಸಂತೋಷ ಎಲ್ಲವೂ ಆಗುತ್ತದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿಸಲುಹಿದ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಸರಿ ಸಾಟಿನೇ ಇಲ್ಲ. ಇಂತಹ ಕರುಣಾಮಯಿ ಅಮ್ಮನಿಗೂ ಅಂತ ಒಂದು ವಿಶೇಷ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವಾಗಿ ಸಂಭ್ರಮದಿAದ ಆಚರಿಸಲಾಗುತ್ತದೆ. ಅಮ್ಮಂದಿರ ದಿನ ಎಂದಾಗ ನೆನಪಾಯಿತು, ಅಮ್ಮಾ ಅನ್ನೋ ಬಗ್ಗೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಅಮ್ಮನ ಪ್ರೀತಿ ಸಾರುವ ಸಿನಿಮಾಗಳು ಬಂದು ಹೋಗಿವೆ. ಅಮ್ಮನ ಮಹತ್ವ ಎಂತಹದ್ದು ಎನ್ನುವುದನ್ನ ತೋರಿಸಿಕೊಟ್ಟಿವೆ. ಇಂತಹ ಚಿತ್ರಗಳು ಇಲ್ಲಿವೆ.
೧೯೭೭ರಲ್ಲಿ ತೆರೆಕಂಡ ‘ತಾಯಿಗಿಂತ ದೇವರಿಲ್ಲ’ ಎಂಬಚಿತ್ರದಲ್ಲಿ ಅಮ್ಮಾ ಎಂದರೆ ಮೈ ಮನವಿಲ್ಲಾ ಹೂವಾಗುವುಮ್ಮಾ ಎಂಬ ಹಾಡನ್ನು ಎಸ್. ಜಾನಕಿಯವರು ಅದ್ಭುತವಾಗಿ ಹಾಡಿದ್ದಾರೆ. ಈ ಹಾಡನ್ನು ಕೇಳುತ್ತಿದ್ದರೆ ಮೈಯಲ್ಲಾ ಪುಳಕವಾಗುತ್ತದೆ. ಈ ಚಿತ್ರದಲ್ಲಿ ನಟ ಶ್ರೀನಾಥ್, ನಟಿ ಜಯಂತಿ, ಮಂಜುಳಾ, ಲೋಕನಾಥ್, ವಜ್ರಮುನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಡಾ. ರಾಜ್‌ಕುಮಾರ್ ಮತ್ತು ಸರಿತಾ ಅಭಿನಯದ ೧೯೮೧ ರಲ್ಲಿ ತೆರೆಕಂಡ ಕೆರಳಿದ ಸಿಂಹ ಚಿತ್ರದಲ್ಲಿ ಅಮ್ಮ ನೀನು ನಮಗಾಗಿ ಅನ್ನೋ ಸುಂದರವಾದ ಹಾಡಿನಲ್ಲಿ ತಾಯಿಯ ಬಗ್ಗೆ ಬಹಳ ರಸವತ್ತಾಗಿ ಬಣ್ಣಿಸಲಾಗಿದೆ. ಅಮ್ಮಾ, ತಾಯಿಯ ಮಡಿಲು, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಅಣ್ಣಯ್ಯ ಹೀಗೆ ಅನೇಕ ಚಿತ್ರಗಳಲ್ಲಿ ಅಮ್ಮಾ ಮಕ್ಕಳ ಸಂಬAಧಗಳ ಬಗ್ಗೆ ಸಾರಿವೆ.
ಹಾಲುಂಡ ತವರು ಚಿತ್ರದಲ್ಲಿ ತಾಯಿ ಇಲ್ಲದಂತೆ ಎಂಬ ಹಾಡು ತಾಯಿಯ ಪ್ರಾಮುಖ್ಯತೆಯನ್ನು ಸಾರಿದೆ. ೨೦೦೩ರಲ್ಲಿ ತೆರೆಕಂಡ ಎಕ್ಸ್ ಕ್ಸೂö್ಯಸ್ ಮಿ ಚಿತ್ರದಲ್ಲಿ ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರು ಎಂಬ ಹಾಡು ಕೇಳುಗರ ಕಣ್ಣಂಚ್ಚಲಿ ನೀರುಕ್ಕಿಸುತ್ತದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ನಟಿಸಿರುವ ಮೌರ್ಯ ಚಿತ್ರದಲ್ಲಿರುವ ಅಮ್ಮಾ ಐ ಲವ್ ಯೂ ಎಂಬ ಹಾಡು ಅಮ್ಮ ಮಗನ ಪ್ರೀತಿಯ ಬಗ್ಗೆ ಸುಂದರವಾಗಿ ಬಣ್ಣಿಸಿದೆ. ಹಾಗೆಯೇ ಶಿವರಾಜ್ ಕುಮಾರ ಅಭಿನಯಿಸಿದ ಜೋಗಿ ಚಿತ್ರದಲ್ಲಿ ಬೇಡುವೆನು ವರನನ್ನು ಅನ್ನುವ ಹಾಡಿನಲ್ಲಿ ಅಮ್ಮ-ಮಗನ ಸೆಂಟಿಮೆAಟ್ ಇಡೀ ಪ್ರೇಕ್ಷಕರ ಮನಗೆದ್ದಿತು. ಶಿವಣ್ಣ ನಟಿಸಿರುವ ತಾಯಿ ಸೆಂಟಿಮೆAಟ್ ಇರುವ ವಜ್ರಕಾಯ ಚಿತ್ರದಲ್ಲಿ ಕೂಡಾ ಅಮ್ಮನ ಕುರಿತ ಹಾಡನ್ನು ನೋಡಬಹುದು. ಚಿರು ಸರ್ಜಾ ಅಭಿನಯಿಸಿದ ಅಮ್ಮಾ ಐಲವ್ ಯೂ ಚಿತ್ರದಲ್ಲಿನ ಅಮ್ಮಾ ನಿನಗ್ಯಾರು ಸಮ ಎನ್ನುವ ಹಾಡು ಅಮ್ಮನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.  ಅಮ್ಮಾ ಎನ್ನುವ ಎರಡಕ್ಷರ ಪ್ರತಿಬಾರಿ ನವಿರಾದ ಕಲ್ಪನೆ ಹುಟ್ಟಿಸುತ್ತದೆ. ಅಮ್ಮಾ ಅನ್ನುವ ಶಕ್ತಿ ಇಂತಹ ಅದ್ಭುತ ಹಾಡನ್ನು ಸೃಷ್ಠಿಸುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಜನಸ್ಪಂದನಾ ಸೇವಾ ಟ್ರಸ್ಟ್ ವತಿಯಿಂದ ಆಹಾರ ವಿತರಣೆ

Sun May 10 , 2020
ಬೆಂಗಳೂರು:ಕೊರೊನಾ‌ ಹಿನ್ನಲೆಯಲ್ಲಿ ಗರ್ಭಿಣಿಯರನ್ನು ಪೌಷ್ಟಿಕ ಆಹಾರ ನೀಡಿ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನ ಮಾಡಲಾಗಿದೆ. ಜನಸ್ಪಂದನಾ ಸೇವಾ ಟ್ರಸ್ಟ್ ಲಾಕ್ ಡೌನ್ ನಡುವೆಯು ತಾಯಂದಿರ ದಿನಾಚರಣೆ ಆಚರಿಸಿದ್ರು..ನಗರದ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರ್ಭಿಣಿಯರನ್ನು ಕೂರಿಸಿ, ಪೌಷ್ಟಿಕ ಆಹಾರ ಕೊಟ್ಟು ಗೌರವ ನೀಡಲಾಯ್ತು. ಮಹಿಳಾ ಸಂಘಟನೆಗಳಿಗೆ ೨೫೦೦ ರೂಪಾಯಿ ಮೌಲ್ಯದ ಕೂಪನ್ ಹಾಗೂ ಸ್ಥಳೀಯ ಎಲ್ಲಾ ಮನೆಗಳಿಗೂ ಗುಣಮಟ್ಟದ ದಿನಸಿಯನ್ನು ಜನಸ್ಪಂದನಾ ಸೇವಾ ಟ್ರಸ್ಟ್ ಅಧ್ಯಕ್ಷ ಆರ್ಯ ನವೀನ್ ನೇತೃತ್ವದ ಯುವಕರ ತಂಡದಿಂದ […]

Advertisement

Wordpress Social Share Plugin powered by Ultimatelysocial