ಇಯರ್ ಪೋನ್ ಬಳಸುವವರೇ ಎಚ್ಚರ..

ಬೀಜಿಂಗ್: ಇಯರ್ ಫೋನ್ ಅತಿಯಾಗಿ ಬಳಸುತ್ತಿರುವವರಿಗೆ ಆತಂಕಕಾರಿ ಸುದ್ದಿ ಇಲ್ಲಿದೆ.‌ ಬೀಜಿಂಗ್ ನಗರದಲ್ಲಿ  10 ವರ್ಷದ ಬಾಲಕನ ಕಿವಿಯಲ್ಲಿ ಬ್ಲ್ಯಾಕ್ ಫಾರೆಸ್ಟ್ ಫಂಗಸ್ ಬೆಳೆದಿದ್ದು ತಜ್ಞರು ಅದನ್ನು ಹೊರತೆಗೆದಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕ ಇಯರ್ ಫೋನ್ ಅತಿಯಾಗಿ ಬಳಸುತ್ತಿದ್ದ. ಕಳೆದ ತಿಂಗಳು ಆತನ ಕಿವಿಯಲ್ಲಿ ತೊಂದರೆ ಶುರುವಾಯಿತು. ಇಯರ್ ಫೋನ್ ಬಳಕೆಯಿಂದ‌ ಕಿವಿಯಲ್ಲಿ ಉಂಟಾಗುವ ಬಿಸಿ ಗಾಳಿ,‌ ಆರ್ದತೆಯನ್ನು ಸೃಷ್ಟಿಸುತ್ತದೆ. ಇದರಿಂದ ಫಂಗಸ್ ಬೆಳೆಯಲು ಅನುಕೂಲವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.  ನಮ್ಮ ಕೈಯಿಂದ ಬ್ಯಾಕ್ಟೀರಿಯಾ ಬೀಜಕಗಳು ಕಿವಿಗೆ ಹೋಗುತ್ತವೆ. ಬ್ಯಾಕ್ಟೀರಿಯಾ ನಿರೋಧಕ ಮಾತ್ರೆ ನೀಡಿದ್ದರಿಂದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವಿವರಿಸಿದ್ದಾರೆ.ಇಯರ್ ಫೋನ್, ಹೆಡ್ ಫೋನ್ ಗಳನ್ನು ಹೆಚ್ಚು  ಬಳಕೆಯಿಂದ‌ ಕಿವಿಯ ತಮಟೆಗೆ ತೊಂದರೆಯಾಗಬಹುದು. ತಲೆ ತಿರುಗುವ, ವಾಂತಿ ಬರುವ ಲಕ್ಷಣ ಕಾಣಬಹುದು. ಒಬ್ಬರು ಬಳಸಿದ ಇಯರ್ ಫೋನನ್ನು ಇನ್ನೊಬ್ಬರು ಬಳಸುವುದರಿಂದ ಕಿವಿಯ ಸೋಂಕುಗಳು ಹರಡಬಹುದು. ಬ್ಲೂಟೂತ್, ವೈಫೈ ಇರುವ ವಯರ್ ಲೆಸ್ ಇಯರ್ ಫೋನ್ ಬಳಕೆಯಿಂದ ರೇಡಿಯೇಶನ್ ಪ್ರಭಾವವಾಗಿ ಜೈವಿಕ ಪರಿಣಾಮ ಉಂಟಾಗಬಹುದು ಎಂದು ಹಲವು ಸಂಶೋಧನೆಗಳು ಹೇಳಿವೆ. ವಿಶ್ವದ ಹಲ ತಜ್ಞ ವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಂಜಾನ್ ಹಬ್ಬಕ್ಕೆ ರಾಬರ್ಟ್ ಹೊಸ ಲುಕ್

Mon May 25 , 2020
ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಒಂದಿಲ್ಲೊAದು ಕುತೂಹಲವನ್ನು ಮೂಡಿಸುತ್ತಲೇ ಇದೆ. ರಂಜಾನ್ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಚಿತ್ರದ ಹೊಸ ಕಲರ್‌ಫುಲ್ ಪೋಸ್ಟರ್ ರಿಲೀಸ್ ಮಾಡಿದೆ. ಇದುವರೆಗೂ ರಿಲೀಸ್ ಆದ ಪೋಸ್ಟರ್‌ಗಳಲ್ಲಿ ೨ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಈ ಪೋಸ್ಟರ್‌ನಲ್ಲಿ ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಕ್ರಿಸ್‌ಮಸ್, ಸಂಕ್ರಾAತಿ, ಯುಗಾದಿ ಹಬ್ಬಗಳ ರೀತಿಯೆ ರಂಜಾನ್ ಪ್ರಯುಕ್ತವೂ ಹೊಸ ಪೋಸ್ಟರ್ ರಿಲೀಸ್ […]

Advertisement

Wordpress Social Share Plugin powered by Ultimatelysocial