ಊರಿಗೆ ತೆರಳುತ್ತಿದ್ದ ಯುವಕರ ದುರ್ಮರಣ

ಬೆಂಗಳೂರಿನ ಎವಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಪುರ ತಾಲೂಕಿನ ಮಲಿಯೂರು ಗ್ರಾಮದ ನಿವಾಸಿಗಳಾ ಮಹೇಶ್ ಮತ್ತು ಮಾದೇಶ್ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದರು ಇದೇ ಸಮಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ವಾಹನ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾರೆ. ವಿಷಯ ತಿಳಿದ ನಂತರ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೋಲಿಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಹಾವಿನ ಮೇಲೆ ಸವಾರಿ ಮಾಡಿದ ಕಪ್ಪೆ

Sat Jun 6 , 2020
ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು ಹಾವು – ಇತರ ಪ್ರಾಣಿಗಳ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಚಾರ. ಆದರೆ ಹಾವಿನ ಮೇಲೆ ಕಪ್ಪೆ ಕುಳಿತು ಸವಾರಿ ಮಾಡುವ ಅಪರೂಪದ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ. ಭಾರತೀಯ ಅರಣ್ಯ ಸೇವೆ […]

Advertisement

Wordpress Social Share Plugin powered by Ultimatelysocial