ಚಿಕ್ಕಬಳ್ಳಾಪುರ: ಜಮಿನು ನೋಂದಣಿ ಮಾಡಲು ೧೨ ಲಕ್ಕ ಬೇಡಿಕೆ ಇಟ್ಟ ಆರ್.ಐ ಮತ್ತು ಗ್ರಾಮಲೆಕ್ಕಿಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಮೂಲದ ನಾರಾಯಣಮೂರ್ತಿ ಎಂಬುವವರು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಮಲ್ಲಿಶೆಟ್ಟಿಪುರ ಗ್ರಾಮದ ಸುಮಾರು ೧೨ ಎಕರೆ ಜಮೀನು ಪಡೆದುಕೊಂಡು ತಮ್ಮ ಹೆಸರಿಗೆ ಖಾತೆ ಬದಲಾಯಿಸಲು ಹೋದಾಗ ಆರ್ ಐ ಮತ್ತು ಗ್ರಾಮಲೆಕ್ಕಿಗ ೧೨ಲಕ್ಷ ರೂ ಬೇಡಿಕೆ ಇಡ್ಡಿದ್ದಾರೆ. ಕೊನೆಗೆ ೭.೫೦ ಲಕ್ಷಕ್ಕೆ ವ್ಯವಹಾರ ಕುದರಿಸಿಕೊಂಡು ಇಂದು ಮುಂಗಡವಾಗಿ ಒಂದು ಲಕ್ಷ ರೂಪಾಯಿಗಳು ಪಡೆದುಕೊಳ್ಳುವಾಗ ಶಿಡ್ಲಘಟ್ಟ – ಚಿಕ್ಕಬಳ್ಳಾಪುರ ಮಾರ್ಗದ ಹಂಡಿನಾಳ ಬಾಲಾಜಿ ಕನ್ವೆಷನ್ ಹಾಲ್, ಬಳಿ ಕಾರಿನಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಆರ್. ಐ ವಿಶ್ವನಾಥ್ ಮತ್ತು ಗ್ರಾಮಲೆಕ್ಕಿಗ ಗೋಕುಲ್ ಎ.ಸಿ.ಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲ್ಯಾಂಡ್ ಡೆವಲಪರ್ ಮತ್ತು ಜಮೀನಿನ ಮಾಲೀಕ ನಾರಾಯಣಮೂರ್ತಿ ನೀಡಿರುವ ದೂರಿನ ಮೇರೆಗೆ ಎ.ಸಿ.ಬಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ತನಿಖೆಪೂರ್ಣಗೊಂಡ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಎ.ಬಿ.ಸಿ ಡೈವೈ.ಎಸ್ಪಿ ಗೋಪಾಲ್ ಜೋಗೀನ್ ತಿಳಿಸಿದರು.
ಎ.ಸಿ.ಬಿ ಬಲೆಗೆ ಬಿದ್ದ ಆರ್.ಐ. ಮತ್ತು ಗ್ರಾಮಲೆಕ್ಕಿಗ

Please follow and like us: