ರಾಜಧಾನಿ ನಿರ್ಮಾತೃ ಕೆಂಪೇಗೌಡ ಅವರ ೧೦೮ ಅಡಿ ಎತ್ತರದ ಪ್ರತಿಮೆಯನ್ನು ದೇವನಹಳ್ಳಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಕೆಂಪಾಪುರದಲ್ಲಿ ಮಾತನಾಡಿದ ಅವರು, ಸುಮಾರು ೨೩ಎಕರೆ ಸ್ಥಳದಲ್ಲಿ ೬೬ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಜೂ.೨೭ರ ಕೆಂಪೇಗೌಡ ಜಯಂತಿಯAದು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದ್ರು. ಜೊತೆಗೆ ಕೆಂಪೇಗೌಡರ ಕಾಲದ ಪ್ರಸಿದ್ಧ ಸ್ಥಳಗಳನ್ನು ಇಂಟರ್ ಲಿಂಕ್ ಮಾಡಲು ಯೋಜನೆ ರೂಪಿಸಲಾಗಿದ್ದು, ಸಾವನದುರ್ಗ ಕೋಟೆ, ಕಲ್ಯ ಗ್ರಾಮ ಸೇರಿದಂತೆ ಹಲವು ಪ್ರಸಿದ್ಧ ತಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಕೆಂಪೇಗೌಡರ ಹುಟ್ಟಿದ್ದ ಊರನ್ನು ಪ್ರವಾಸಿತಾಣ ಮಾಡಲು ಸಿದ್ಧತೆ ನಡೆದಿದೆ. ಕೆಂಪೇಗೌಡರ ಸ್ಮಾರಕದ ಜೊತೆಯಲ್ಲಿ ಕೆಂಪಾಪುರದ ಕೆರೆ ಅಭಿವೃದ್ಧಿ ಸಹ ಆಗಲಿದೆ ಎಂದು ಹೇಳಿದ್ರು.
ಕೆಂಪೇಗೌಡ ಪ್ರತಿಮೆ ನಿರ್ಮಾಣ

Please follow and like us: