ನಿನ್ನೆ ಜೀವನ್ ಭೀಮಾನಗರದಲ್ಲಿ ಪೊಲೀಸರ ಜೊತೆ ಕುಡಿದು ಯುವತಿಯರು ರಂಪಾಟ ಮಾಡಿದ್ದು ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.. ಬೆಳಗ್ಗೆ ಪಾಸ್ ಇಲ್ಲದೇ ಬರುತ್ತಿದ್ದ ಮಹಿಳೆಯನ್ನು ಪೊಲೀಸರು ಹಿಡಿದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಕೆಂಡಮಂಡಲಳಾದ ಮಹಿಳೆ ದೊಡ್ಡ ಅವಾಂತರ ಸೃಷ್ಠಿಸಿದ್ದಾಳೆ . ಪೊಲೀಸರ ಮೇಲೆ ಗಲಾಟೆ ತೆಗೆದ ಮಹಿಳೆ ಕೂಗ್ಗಾಡಿ ರಂಪಾಟ ಮಾಡಿರೋ ಘಟನೆ ಕೆ.ಆರ್. ಸರ್ಕಲ್ ನಡೆದಿದೆ… ಪಾಸ್ ಇಲ್ಲದೇ ಆಟೋ ಕರೆದುಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಮಹಿಳೆಯನ್ನು ಪೋಲಿಸರು ಪರಿಶೀಲಿಸಿದಾಗ ನಾನು ಯಾರು ಗೊತ್ತೇ ಎಂದು ಪೋಲಿಸರಿಗೆ ಅವಾಜ್ ಹಾಕಿ .ತನಗೆ ಮಿನಿಷ್ಟರ್ ಗೊತ್ತು ನನ್ನನ್ನು ಬಿಡಿ ಎಂದು ಪೋಲಿಸರಿಗೆ ಧಮ್ಕಿ ಹಾಕಿದ್ದಾಳೆ. ನಂತರ ಕೂಗಾಡುತ್ತಾ ನಡೆದುಕೊಂಡೇ ಹೋಗಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ಯದಿದ್ದಾರೆ.. ಹಲಸೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..
ಕೆ.ಆರ್.ಸರ್ಕಲ್ ಬಳಿ ಮಹಿಳೆ ಗಲಾಟೆ
Please follow and like us: