ಕೇಂದ್ರ ಹಣಕಾಸು ಸಚಿವಾಲಯದಿಂದ ೩೬,೬೫೯ ಕೋಟಿ ಹಣ ಬಿಡುಗಡೆ

ಕೊರೊನಾವೈರಸ್ ರಾಷ್ಟ್ರವ್ಯಾಪಿ  ಲಾಕ್‌ಡೌನ್ ಹಿನ್ನಲೆಯಲ್ಲಿ ೧೬.೦೧ ಕೋಟಿ ಫಲಾನುಭವಿಗಳಿಗೆ ೩೬,೬೫೯ ಕೋಟಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.ಮಾ. ೨೪ ರಿಂದ ಏ.೧೭ರವರೆಗೆ ಪ್ರಧಾನ ಮಂತ್ರಿ ಕಿಸಾನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾತೃ ವಂದನಾ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್‌ನಂತಹ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.ರಾಜ್ಯ ಸರ್ಕಾರಗಳು ೧೮೦ ಕಲ್ಯಾಣ ಯೋಜನೆಗಳ ಮೂಲಕ ೯,೨೧೭ ಕೋಟಿಯನ್ನು ೪.೫೦ ಕೋಟಿ ಫಲಾನುಭವಿಗಳಿಗೆ ವಿತರಿಸಲು ಪಿಎಫ್‌ಎಂಎಸ್(ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ) ಅನ್ನು ಬಳಸಿಕೊಂಡಿವೆ.

Ghostwriting Agentur

Please follow and like us:

Leave a Reply

Your email address will not be published. Required fields are marked *

Next Post

ಕೆ.ಆರ್.ಸರ್ಕಲ್ ಬಳಿ ಮಹಿಳೆ ಗಲಾಟೆ

Mon Apr 20 , 2020
ನಿನ್ನೆ ಜೀವನ್ ಭೀಮಾನಗರದಲ್ಲಿ ಪೊಲೀಸರ ಜೊತೆ ಕುಡಿದು ಯುವತಿಯರು ರಂಪಾಟ ಮಾಡಿದ್ದು ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.. ಬೆಳಗ್ಗೆ ಪಾಸ್ ಇಲ್ಲದೇ ಬರುತ್ತಿದ್ದ ಮಹಿಳೆಯನ್ನು  ಪೊಲೀಸರು ಹಿಡಿದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಕೆಂಡಮಂಡಲಳಾದ ಮಹಿಳೆ ದೊಡ್ಡ ಅವಾಂತರ ಸೃಷ್ಠಿಸಿದ್ದಾಳೆ . ಪೊಲೀಸರ ಮೇಲೆ ಗಲಾಟೆ ತೆಗೆದ ಮಹಿಳೆ ಕೂಗ್ಗಾಡಿ ರಂಪಾಟ ಮಾಡಿರೋ ಘಟನೆ ಕೆ.ಆರ್. ಸರ್ಕಲ್ ನಡೆದಿದೆ…  ಪಾಸ್ ಇಲ್ಲದೇ ಆಟೋ ಕರೆದುಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ […]

Advertisement

Wordpress Social Share Plugin powered by Ultimatelysocial