ಕೊರೊನಾ ಎಫೆಕ್ಟ್ ಹಳಸಿದ ವೃದ್ಧರ ಸಂಬಂಧ

ನವದೆಹಲಿ: ಲಾಕ್‌ಡೌನ್ ವೇಳೆ ತಮ್ಮ ಆರೋಗ್ಯ ಹದಗೆಡುತ್ತಿದೆ ಮತ್ತು ಯುವಜನತೆ ಜತೆಗೆನ ಸಂಬಂಧ ಹಾಳಾಗುತ್ತಿದೆ ಎಂದು ವೃದ್ಧರು ಭಾವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದರ ಜೊತೆಗೆ ಮಗ, ಮಗಳ ಜತೆಗೆನ ಸಂಬಂಧ ಹಾಳುಗುತ್ತಿದೆ ಎನ್ನುತ್ತಿದ್ದಾರೆ. ಏಜ್‌ವೆಲ್ ಫೌಂಡೇಶನ್ ಸಂಸ್ಥೆಯು ದೂರವಾಣಿ ಮೂಲಕ ೫,೦೦೦ ವೃದ್ಧರನ್ನು ಸಮೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಪ್ರತಿ ಇಬ್ಬರಲ್ಲೊಬ್ಬರಂತೆ ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ, ಬೆದರಿಕೆ, ನಿರ್ಲಕ್ಷ್ಯ, ಪ್ರತ್ಯೇಕವಾಸದ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಏಂಕಾಗಿಯಾಗಿ ವಾಸಿಸುವ ವೃದ್ಧರಿಗೆ ಪ್ರಾಯೋಗಿಕ ಸಮಸ್ಯೆಗಳು ಹೆಚ್ಚಾದರೆ, ಕುಟುಂಬದವರ ಜತೆ ವಾಸಿಸುವವರುಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ, ಹಣಕಾಸು ಬೆಂಬಲ, ಸಾಮಾಜಿಕ ಸಂವಹನ, ಸಾಕಷ್ಟು ಸ್ವಾತಂತ್ರ್ಯವಿಲ್ಲದೆ ವೃದ್ಧರು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಏಜ್‌ವೆಲ್ ಫೌಂಡೇಶನ್‌ನ ಸ್ಥಾಪಕ ಹಿಮಾಂಶು ರಾಥ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಾಮಾಜಿಕ ಜಾಲತಾಣಗಳಿಗೆ ನೋಟಿಸ್

Sun Apr 26 , 2020
ನವದೆಹಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋರ್ನ್ ವೆಬ್‌ಸೈಟ್‌ಗಳ ಮೂಲಕ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವೀಟರ್ ಮತ್ತು ವಾಟ್ಸಾಪ್‌ಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ನೀಡಿದೆ. ಕೊರೊನಾ ಸೋಂಕು ಸಂಬಂಧ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಅಶ್ಲೀಲ ಚಿತ್ರಗಳ ವೀಕ್ಷಣೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತ ಸೇರಿದಂತೆ ವಿದೇಶಿ ಪೋರ್ನ್ ಸೈಟ್‌ಗಳ ಮೂಲಕ ಜನರು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ನೋಡುವುದು ಅಧಿಕವಾಗಿದೆ. […]

Advertisement

Wordpress Social Share Plugin powered by Ultimatelysocial