ಕೊರೊನಾ ಸೋಂಕಿತರಿಗಾಗಿ ಮೀಡಿದ ಕ್ರಿಕೆಟಿಗರ ಹೃದಯ

ಬೆಂಗಳೂರು: ಕೊರೊನಾ ಪೀಡಿತರಿಗಾಗಿ ಕ್ರಿಕೆಟ್‌ಗರ ಹೃದಯ ಮೀಡಿದಿದೆ .ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಎ.ಬಿ. ಡೆವಿಲಿಯರ್ಸ್ ತಾವು ಅಭ್ಯಾಸ ಮಾಡಿದ್ದ ಕ್ರಿಕೆಟ್ ಕಿಟ್‌ನ್ನೇ ಹರಾಜಿಗಿಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.  ಅವರು ಕೋವಿಡ್-೧೯ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು, ಗುಜರಾತ್ ಎದುರು ಕೊಹ್ಲಿ ಬಳಸಿದ್ದ ಬ್ಯಾಟ್ ಹಾಗೂ ಎಬಿಡಿ ಗ್ಲೌಸ್, ಜೆರ್ಸಿ ಹರಾಜು ಹಾಕಲು ಮುಂದಾಗಿದ್ದಾರೆ ಆಸಕ್ತರು ಆನ್‌ಲೈನ್ ಮೂಲಕ ಈ ಪರಿಕರಗಳನ್ನು ಖರೀದಿಸಬಹುದಾಗಿದೆ. ಇವುಗಳಿಂದ ಸಂಗ್ರಹವಾಗುವ ಒಟ್ಟು ಮೊತ್ತದ ಶೇ ೫೦ರಷ್ಟು ಭಾಗವನ್ನು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಉಳಿದರ್ಧ ಭಾಗವನ್ನು ಭಾರತದಲ್ಲಿ ಕೋವಿಡ್-೧೯ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲು ಕ್ರಿಕೆಟಿಗರು ನಿರ್ಧರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದರ್ಶನ ಅಭಿಮಾನಿಗಳ ಆಕ್ರೋಶ

Tue Apr 28 , 2020
ನಟ ಸುದೀಪ್ ನಟನೆಯ ಕೋಟಿಗೊಬ್ಬ-೩ ಸಿನಿಮಾ ಹಾಡು ನಿನ್ನೆ ಬಿಡುಗಡೆಯಾಗಿದ್ದು, ದಾಖಲೆಯ ಮೊತ್ತಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಪೋಸ್ಟ್ ಹಾಕಿದ ಆನಂದ್ ಆಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಾಶನೆ ಅದರಿಸುವ ಹಾಡು ಅತೀ ವೇಗವಾಗಿ ೧೦ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಎಂದು ಪೋಸ್ಟ್ ಪ್ರಕಟಿಸಿತ್ತು ಇದರಿಂದ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಅತಿವೇಗವಾಗಿ ೧೦ಲಕ್ಷ ವಿಕ್ಷಣೆ ಪಡೆದ ಹಾಡು ಇದಲ್ಲ. ಯಜಮಾನ ಚಿತ್ರದ […]

Advertisement

Wordpress Social Share Plugin powered by Ultimatelysocial