ಕೊರೊನಾ ಸೋಂಕಿತ ಬಿಲ್ಡಿಂಗ್ ಮೇಲಿಂದ ಬಿದ್ದು ಆತ್ಮಹತ್ಯೆ

ಕೊರೊನಾ ಸೋಂಕು ಇರೋದು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕಗೊಂಡ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಶರಣಾಗಿರೋ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.ಕೊರೊನಾ ಸೋಂಕು ಪಾಸಿಟಿವ್​ ಅಂತ ಗೊತ್ತಾದ ಮೇಲೆ ರೋಗಿ ಸಂಖ್ಯೆ 466,  ಆಸ್ಪತ್ರೆ ಕಟ್ಟಡದ 3ನೇ ಮಹಡಿಯಲ್ಲಿರುವ ಟ್ರೊಮ ಕೇರ್​ ಸೆಂಟರ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಟೋ‌ ಓಡಿಸಿಕೊಂಡು ಅಣ್ಣನ‌ ಮನೆಯಲ್ಲಿ ಜೀವನ ಸಾಗಿಸ್ತಿದ್ದ 50 ವರ್ಷದ ವ್ಯಕ್ತಿ, ಊಸಿರಾಟದ ತೊಂದರೆ ಎಂದು ಏಪ್ರಿಲ್ 24ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೋಂಕು ಇರೋದು ದೃಢಪಡ್ತಿದ್ದಂತೆ ಮನೆಯವರನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ, ಕಳೆದ 4 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ತನಗೆ ಸೋಂಕು ಇದೆ ಅಂತ ಗೊತ್ತಾದ ಬಳಿಕ ಆತಂಕಕೊಂಡಿದ್ದ..ಇಂದು ಬೆಳಗ್ಗೆ ಇಡ್ಲಿ ಬೇಕು ಅಂತ ಸಿಬ್ಬಂದಿಗೆ ಹೇಳಿದ್ರು.ಇಡ್ಲಿ ತರಲು ಹೋದಾಗ ರೋಗಿ ಬಿಲ್ಡಿಂಗ್ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಘಟನೆ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಣ ಮಾಡ್ತಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Please follow and like us:

Leave a Reply

Your email address will not be published. Required fields are marked *

Next Post

ಸುಪ್ರೀಂ ಕೋರ್ಟ್ ನಲ್ಲಿ ವಲಸಿಗರ ಅರ್ಜಿ ವಿಚಾರಣೆ

Mon Apr 27 , 2020
ನವದೆಹಲಿ: ಸುಪ್ರೀಂಕೋರ್ಟ್​​ನಲ್ಲಿಂದು ವಲಸಿಗರ ಪರ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಲಾಕ್​ಡೌನ್ ವೇಳೆ ಬೇರೆ ಬೇರೆ ಕಡೆಗಳಲ್ಲಿ ಸಿಲುಕಿಕೊಂಡಿರುವ ವಲಸಿಗರ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಲ್ಲಿ, ಅವರನ್ನು ವಾಪಸ್ ತಮ್ಮ ತವರಿಗೆ ಕಳುಹಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಅಂತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದ್ದವು.ಕಳೆದ ತಿಂಗಳು ಕೇಂದ್ರ ಸರ್ಕಾರ, ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿದಾಗಿನಿಂದ, ಲಕ್ಷಾಂತರ ವಲಸಿಗರು ತಮ್ಮ ಊರಿಗೆ ವಾಪಸ್ ಹೋಗಲಾಗದೆ, ದುಡಿಯಲು ಕೆಲಸವಿಲ್ಲದೇ, […]

Advertisement

Wordpress Social Share Plugin powered by Ultimatelysocial