ಗಾರ್ಮೆಂಟ್ಸ್ ನೌಕರರಿಗೆ ವೇತನ ನೀಡದ ಮಾಲೀಕರು

ಇತ್ತೀಚಿಗೆ ಕೆಲ ಗಾರ್ಮೆಂಟ್ಸ್ ಕಾರ್ಖಾನೆಗಳ ಆಡಳಿತ ವರ್ಗ, ಕಾರ್ಮಿಕರನ್ನು ಜೀತದಾಳುಗಳಂತೆ ಕಾಣುತ್ತಿದ್ದಾರೆಯೇ ಎಂಬ ಅನುಮಾನ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ಲಾಕ್ ಡೌನ್ ಹಿನ್ನಲೆ, ಹುಳಿಮಾವಿನಲ್ಲಿರುವ ಲೀಸ್ ಅಪ್ರೇಸೆಲ್ಸ್ ಗಾರ್ಮೆಂಟ್ಸ್ ನ ಮಾಲೀಕ ಸುಬ್ರಮಣ್ಯ, ಹಲವು ದಿನಗಳಿಂದ ಸ್ಯಾಲರಿ ಕೊಡದೇ ನೌಕರರನ್ನು ಪೀಡುಸುತ್ತಿದ್ದಾನೆ. ಇದರಿಂದ ಬೇಸತ್ತ ನೌಕರರು. ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಎಷ್ಟೋ ಸಂಸ್ಥೆಗಳು ಮೂಲ ವೇತನಕ್ಕಿಂತ ಕಡಿಮೆ ವೇತನವನ್ನು ನೀಡುತ್ತಿದೆ. ವರ್ಷಕ್ಕೆ ಕೊಡಬೇಕಾದ ಬೋನಸ್ ಗಳನ್ನು ಸಹ ನೀಡದೆ, ಕಾರ್ಮಿಕರ ಕೈಯಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಬಂಡವಾಳಶಾಹಿಗಳಿಲ್ಲದೆ ಸರ್ಕಾರ ನಡೆಯುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾರ್ಮಿಕರ ಹಿತ ರಕ್ಷಣೆ ಹಾಗೂ ಕೈಗಾರಿಕ ಶಾಂತಿಯನ್ನು ಕಾಪಾಡುವುದು ಇಂದಿನ ದಿನಗಳಲ್ಲಿ ಬಹಳ ಅತ್ಯಗತ್ಯ. ಕಾರ್ಮಿಕ ಇಲಾಖೆಯು ಸೂಚನೆ ನೀಡಿ ಸುಮ್ಮನೆ ಕೂರಬಾರದು. ಇಲಾಖೆಯ ಅಧಿಕಾರಿಗಳು ಎಲ್ಲಾ ಕಾರ್ಖಾನೆಗಳಿಗೆ ಭೇಟಿ ನೀಡಿ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿಬೇಕು.

 

Please follow and like us:

Leave a Reply

Your email address will not be published. Required fields are marked *

Next Post

ವರದಿಗಾರ ಹನಮಂತು ಮನಗೆ ಹೆಚ್ ಡಿ ಕೆ ಭೇಟಿ

Wed Apr 22 , 2020
ರಾಮನಗರ : ಅಪಘಾತದಲ್ಲಿ ಸಾವನ್ನಪ್ಪಿದಂತ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನಮಂತು ಮನಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಹನಮಂತು ಪತ್ನಿ, ತಾಯಿ ಸೇರಿದಂತೆ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅಲ್ಲದೇ ತಾವು ಘೋಷಿಸಿದಂತೆ 5 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ನ್ನು ಹನಮಂತು ಪತ್ನಿಗೆ ಹಸ್ತಾಂತರಿಸಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದೆ ಅವರು, ಹನಮಂತು ಅವರ ಪತ್ನಿಗೆ ಅತ್ತೆಯ ಮನೆಯಲ್ಲಿಯೇ ಇರುವಂತೆ […]

Advertisement

Wordpress Social Share Plugin powered by Ultimatelysocial