‘ಚಹಾ ಥಾ ಕ್ಯಾ ಹಮ್ ನೇ’ ಗೀತೆಗೆ ಕಿರಣ್ ರವೀಂದ್ರನಾಥ್ ರಾಗ ಸಂಯೋಜನೆ

ಸದಾ ಹೊಸ ರಾಗ, ಹೊಸ ಚಿಂತನೆಯಲ್ಲಿ ತೊಡಗಿರುವ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಈಗ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾದಲ್ಲಿ ಎಲ್ಲ ಹಾಡುಗಳಿಗೆ ಮಾಧುರ್ಯ ತುಂಬಿಕೊಟ್ಟಿದ್ದ ಕಿರಣ್ ರವೀಂದ್ರನಾಥ್ ಈಗ ಲಾಕ್‌ಡೌನ್ ಸಂದರ್ಭದಲ್ಲಿ ‘ಚಹಾ ಥಾ ಕ್ಯಾ ಹಮ್ ನೇ’ ಗೀತೆಯನ್ನು ಸ್ವತಃ ಹಾಡಿದ್ದಾರೆ ಹಾಗೂ ರಾಗ ಸಂಯೋಜನೆ ಸಹ ಮಾಡಿದ್ದಾರೆ.

ಇವರ ಸ್ನೇಹಿತ ಗಿಟಾರ್ ವಾದ್ಯಗಾರ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಹಮೀದ್ ಹಾಸನ್, ಈ ಹಿಂದಿ ಹಾಡನ್ನು ರಚಿಸಿದ್ದಾರೆ. 3 ನಿಮಿಷ 25 ಸೆಕಂಡ್ ಅವಧಿಯ ಈ ವಿಡಿಯೋ ಹಾಡನ್ನು ರೆಕಾರ್ಡ್ ಮಾಡಿ ಕಿಬೋರ್ಡ್, ರಿದಮ್ ಪ್ರೋಗ್ರಾಮ್ ಸಹ ಕಿರಣ್ ರವೀಂದ್ರನಾಥ್ ಮಾಡಿದ್ದಾರೆ. ವರುಣ್ ಪ್ರದೀಪ್ ಮಾಸ್ಟರಿಂಗ್ ಮಾಡಿ, ಗಣೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಲಂಚ ಪಡದ್ರೆ ಟ್ರಾನ್ಸಪರ್ ಭಾಗ್ಯ

Sun May 10 , 2020
  ಲಂಚ ಸ್ವೀಕಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಎಸಿಪಿ ಪ್ರಭುಶಂಕರ್ ರನ್ನು ಸಿಸಿಬಿಯಿಂದ ವರ್ಗಾವಣೆ ಮಾಡಲಾಗಿದೆ. ರೇಡ್ ಮಾಡಿ ಪ್ರಕರಣ  ಮುಚ್ಚಿ ಹಾಕಲು ಸಿಗರೇಟ್ ಡೀಲರ್ ಗಳಿಂದ ಪ್ರಭುಶಂಕರ್ 60 ಲಕ್ಷರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕಮಿಷನರ್ ಗೆ ವರದಿ ಸಲ್ಲಿಸಿದ್ದಾರೆ. ಕಾನೂನಿನ ಮುಂದೆ ಎಲ್ರೂ ಒಂದೇ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡೋದು ಸರಿಯಲ್ಲ.  ಇಷ್ಟಾದರೂ ಎಸಿಪಿಯನ್ನು […]

Advertisement

Wordpress Social Share Plugin powered by Ultimatelysocial