ಜೈಲಿಗೆ ಕರೆತರುವ ಆರೋಪಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ

ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ನೀಡುವ ಆರೋಪಿಗಳಿಗೆ ಕೊರೊನಾ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳು ಕೊರೊನಾ ಟೆಸ್ಟ್ ಮಾಡಿಸಿ, ನಂತರ ಜೈಲಿಗೆ ಬಿಡಬೇಕು ಅಂತ ಬೆಂಗಳೂರು ಸೆಂಟ್ರಲ್ ಜೈಲು ಅಧೀಕ್ಷಕರಾದ ವಿ. ಶೇಷುಮೂರ್ತಿ, ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಈಗಾಗಲೇ 5000 ಕೈದಿಗಳಿದ್ದಾರೆ. ಸಾಮಾನ್ಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಿದೆ. ಕೈದಿಗಳಲ್ಲಿ ಸೋಂಕು ಹರಡದಂತೆ ಸರ್ಕಾರದ ಸೂಚನೆ ಅನ್ವಯ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆರೋಪಿಗಳಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಕೊರೊನಾ ಪರೀಕ್ಷೆ ನಡೆಸಿ, ಸೋಂಕು ಇಲ್ಲದಿರುವುದು ದೃಢಪಟ್ಟ ನಂತರವೇ ಜೈಲಿಗೆ ಕಳಿಸಬೇಕೆಂದು ಸೆಂಟ್ರಲ್ ಜೈಲು ಅಧೀಕ್ಷಕರರು ಪತ್ರದ ಮೂಲಕ ಮನವಿ ಮಾಡಿದ್ದಾರೆ.ಒಂದು ವೇಳೆ ಕೊರೊನಾ ಸೋಂಕು ಕಂಡುಬಂದಲ್ಲಿ ಪೊಲೀಸ್ ವಶದಲ್ಲಿಯೇ ಪ್ರತ್ಯೇಕವಾಗಿಟ್ಟು, ಚಿಕಿತ್ಸೆ ಮುಗಿದು ಗುಣಮುಖರಾದ ನಂತರ ಕಾರಾಗೃಹಕ್ಕೆ ಒಪ್ಪಿಸಲು ತಮ್ಮ ಅಧೀನದಲ್ಲಿ ಬರುವ ಎಲ್ಲಾ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗೆ ಸೂಚಿಸುವಂತೆ ಕೇಂದ್ರ ಕಾರಾಗೃಹ ಬೆಂಗಳೂರಿನ ಮುಖ್ಯ ಅಧೀಕ್ಷಕರಾದ ವಿ. ಶೇಷುಮೂರ್ತಿಯವರು, ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಟೆಸ್ಟ್ ರಿಸಲ್ಟ್ ಬರುವ ಸಾಧ್ಯತೆ- ಪೊಲೀಸರಲ್ಲಿ ಆತಂಕ

Mon Apr 27 , 2020
ಬೆಂಗಳೂರು: ಪಾದರಾಯನಪುರದಲ್ಲಿ‌ ಗಲಭೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಕೊರೊನಾ ತಪಾಸಣೆಯ ಫಲಿತಾಂಶ ಇಂದು ಕೈ ಸೇರುವ ಸಾಧ್ಯತೆ ಇದೆ. ಪೊಲೀಸ್ ಸಿಬ್ಬಂದಿ, ಗಲಾಟೆ ಪ್ರಕರಣ ಆರೋಪಿಗಳ ಪತ್ತೆ ಕರ್ತವ್ಯದಲ್ಲಿ ತೊಡಗಿದ್ದರು.  ಬಂಧನದ ಬಳಿಕ ರಾಮನಗರ ಜೈಲಿನಲ್ಲಿ ಇರಿಸಿದ್ದ ವೇಳೆ ಐವರು ಆರೋಪಿಗಳಲ್ಲಿ ಸೋಂಕು ಇರೋದು ದೃಢಪಟ್ಟಿತ್ತು. ಹೀಗಾಗಿ ಕಿಡಿಗೇಡಿಗಳ ಪತ್ತೆಗೆ ಶ್ರಮಿಸಿದ್ದ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಪೊಲೀಸರನ್ನ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಮೈಸೂರು ರಸ್ತೆಯ ಸಿಎಆರ್ […]

Advertisement

Wordpress Social Share Plugin powered by Ultimatelysocial