ತಂದೆಯೆದುರೇ ಗ್ರಾಮಸ್ಥರಿಂದ ಬಾಲಕಿ ಮೇಲೆ ಅಮಾನುಷ ಹಲ್ಲೆ

ಗುಜರಾತ್ : ಛೋಟಾ ಉದೇಪುರ ಜಿಲ್ಲೆಯ ಬಿಲ್ವಂತ್​ ಗ್ರಾಮದ 16 ವರ್ಷದ ಬಾಲಕಿಯೊಬ್ಬಳು ಯುವಕನ ಜತೆ ಓಡಿ ಹೋದ ಕಾರಣಕ್ಕೆ ಆಕೆಯ ತಂದೆಯ ಎದುರೇ ಬಾಲಕಿಯನ್ನು ಹೀನಾಯವಾಗಿ ಥಳಿಸಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಓಡಿಹೋಗಿರುವುದಕ್ಕೆ ಇದು ಶಿಕ್ಷೆ ಎಂದು ಹೇಳಿರುವ ಮೂವರು ಪುರುಷರು ಅತ್ಯಂತ ಕ್ರೂರವಾಗಿ ಬಾಲಕಿಯನ್ನು ಥಳಿಸಿದ್ದಾರೆ. ಕೂದಲನ್ನು ಅಮಾನುಷವಾಗಿ ಎಳೆದು ಹಲ್ಲೆ ಮಾಡುವ ಸಂದರ್ಭದಲ್ಲಿ ಬಾಲಕಿಯ ಆಕ್ರಂದನ ಮುಗಿಲು ಮುಟ್ಟಿದ್ದರೂ ಆಕೆಯ ತಂದೆ ಸೇರಿದಂತೆ ಗ್ರಾಮಸ್ಥರೆಲ್ಲಾ ದೃಶ್ಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಹೀಗೆ ಓಡಿ ಹೋಗುವ ಮೂಲಕ ತಮ್ಮ ಗ್ರಾಮಕ್ಕೆ, ತಮ್ಮ ಸಮುಯದಾಯಕ್ಕೆ ಅಗೌರವ ತಂದಿದ್ದಾಳೆ ಬಾಲಕಿ. ಅದಕ್ಕಾಗಿ ಈ ಶಿಕ್ಷೆ. ಈ ರೀತಿ ಮುಂದೆ ಯಾರೂ ಮಾಡುವ ಸಾಹಸ ಮಾಡಬಾರದು. ಎಲ್ಲರಿಗೂ ಇದು ಪಾಠವಾಗಬೇಕು ಎಂದು ಆಕೆಯನ್ನು ಥಳಿಸುವಾಗ ಗ್ರಾಮಸ್ಥರು ಹೇಳಿದ್ದಾರೆ. ಇದನ್ನು ಗ್ರಾಮಸ್ಥರು ಮೊಬೈಲ್​ ಫೋನ್​ನಲ್ಲಿ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಈ ಬಗ್ಗೆ ಪೊಲೀಸರಿಗೆ ದೂರು ಮುಟ್ಟಿದೆ. ಬಾಲಕಿಯ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ವಿವಿಧ ಕಲಂಗಳ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಒಂದೇ ದಿನ ಬರೊಬ್ಬರಿ 7466 ದಾಖಲೆಯ ಸೋಂಕು ಪತ್ತೆ

Fri May 29 , 2020
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 7466 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಡಪಟ್ಟಿವೆ.  ಒಂದೇ ದಿನದಲ್ಲಿ ಇದುವರೆಗಿನ ದಾಖಲೆಯಾಗಿದೆ.ಎಂದು ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ ಹೆಚ್ಚಿನ ಕೊರೊನಾ ವೈರಸ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಇರಾನ್‌ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೇರಿದ್ದ ಭಾರತ, ಇಂದು (ಮೇ 29) ಟರ್ಕಿಯನ್ನು ಹಿಂದಿಟ್ಟು 9ನೇ ಸ್ಥಾನಕ್ಕೆ ತಲುಪಿದೆ . ಒಂದೇ ದಿನದಲ್ಲಿ 175 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದರೆ. ಭಾರತದಲ್ಲಿ […]

Advertisement

Wordpress Social Share Plugin powered by Ultimatelysocial