ಭುವನೇಶ್ವರ: ಒಡಿಶಾ ರಾಜ್ಯದ ಧೆಂಕನಾಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಎರಡು ಸೀಟ್ಗಳ ವಿಮಾನವೊಂದು ನೆಲಕ್ಕುರುಳಿದೆ. ಈ ಘಟನೆಯಲ್ಲಿ ವಿಮಾನದೊಳಗಿದ್ದ ಮಹಿಳಾ ಪೈಲಟ್ ಹಾಗೂ ಆಕೆಯ ಟ್ರೈನರ್ ಸಾವನ್ನಪ್ಪಿದ್ದಾರೆ. ಪೈಲಟ್ ಆಗಿ ಆಯ್ಕೆಯಾಗಿದ್ದ ಮಹಿಳೆಗೆ ಧೆಂಕನಾಲ್ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ವಿಮಾನ ಪತನಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಟ್ರೈನಿ ಪೈಲಟ್ ಆಗಿದ್ದ ಅನೀಸ್ ಫಾತಿಮಾಗೆ ಕ್ಯಾಪ್ಟನ್ ಸಂಜೀವ್ ಕುಮಾರ್ ತರಬೇತಿ ನೀಡುತ್ತಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.
ತರಬೇತಿ ವಿಮಾನ ಪತನ

Please follow and like us: