ತಾಯಿಯ ಸಾವಿನ ಬೆನ್ನಲ್ಲೇ ಇಹಲೋಕ ತ್ಯಜಿಸಿದ ಬಾಲಿವುಡ್ ನಟ ಇರ್ಫಾನ್ ಖಾನ್

ತನ್ನ ಅದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇರ್ಫಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಂತ ಅಂದ್ರೆ ಕೆಲ ದಿನಗಳ ಹಿಂದೆ ಇರ್ಫಾನ್ ತಾಯಿ ಕೂಡ ಮೃತಪಟ್ಟಿದ್ದರು. ತಾಯಿಯ ಮುಖವನ್ನು ನೋಡಲಾಗದ ಸ್ಥಿತಿಯಲ್ಲಿದ್ದ ಖಾನ್ ಈಗ ತಾಯಿ ಬಳಿಗೆ ಹೊರಟು ಹೋಗಿದ್ದಾರೆ.

ಬಾಲಿವುಡ್ನಲ್ಲಿ ತನ್ನದೇ ಆದ ಚಾಫು ಮೂಡಿಸಿದ್ದ ಇರ್ಫಾನ್ ಖಾನ್ ಇನ್ನು ನೆನಪು ಮಾತ್ರ. ಡಿಫೆರೆಂಟ್ ಮ್ಯಾನರಿಸಂನಿಂದಲೇ ಫೇಮಸ್ ಆಗಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖಾನ್ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಬಳಿಕ ಮುಂಬೈಗೆ ಬಂದಿದ್ದ ಇರ್ಫಾನ್ ಖಾನ್ ಚೇತರಿಸಿಕೊಂಡಿದ್ದರು. ನಿನ್ನೆ ದಿಢೀರನೇ ಅಸ್ವಸ್ಥರಾದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಇರ್ಫಾನ್ ರಾಜಸ್ಥಾನದ ಜೈಪುರನ ಸಮೀಪದ ಟೋಂಗ್ ಹಳ್ಳಿಯಲ್ಲಿ 1967 ಜನವರಿ 07 ರಂದು ಜನಿಸಿದ್ದರು. ಪಾಲಕರ ಮೂವರು ಮಕ್ಕಳಲ್ಲಿ ಇರ್ಫಾನ್ ಹಿರಿಯರಾಗಿದ್ರು. ಅವರ ತಂದೆ ಸಾವಿನ ನಂತರದಲ್ಲಿ ಅವರು ದೆಹಲಿಯ ರಾಷ್ಟ್ರೀಯ ಡ್ರಾಮಾ ಸ್ಕೂಲ್ ಸೇರಿದ್ದರು. ಇರ್ಫಾನ್ ಖಾನ್ ಅವರ ಕಲೆಯನ್ನು ಗುರುತಿಸಿದ್ದ ಮೀರಾ ನಾಯರ್ 1988 ರಲ್ಲಿ ಸಲಾಂ ಬಾಂಬೆ ಚಿತ್ರಕ್ಕೆ ಆಯ್ಕೆ ಮಾಡಿದ್ರು. ಆದರೆ ದುರದೃಷ್ಟ ಸಿನಿಮಾ ಎಡಿಟಿಂಗ್ ವೇಳೆ ಅವರ ಪಾತ್ರವನ್ನು ತೆಗೆದು ಹಾಕಲಾಗಿತ್ತು. ನಂತರ ನಿರ್ದೇಶಕಿ ಮೀರಾ 2006 ರಲ್ಲಿ ತಮ್ಮ ದಿ ನೇಮ್ ಸೇಕ್ ಸಿನಿಮಾದಲ್ಲಿ ಇರ್ಫಾನರನ್ನ ಆಯ್ಕೆ ಮಾಡಿಕೊಂಡಿದ್ರು. ಖಾನ್ ಸಿನಿಮಾ ರಂಗಕ್ಕೆ ಎಂಟ್ರೀಯಾಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೇ ಸ್ಟ್ರಗಲ್ ಮಾಡಿ, ತಮ್ಮ ನಟನೆಯ ಮೂಲಕ ಚಿತ್ರರಂಗದ ಉತ್ತುಂಗದ ಸ್ಥಾನಕ್ಕೇರಿದ್ರು.

ಗಾಡ್ ಫಾದರ್ ಇಲ್ಲದೇ ಬೆಳೆದ ಇರ್ಫಾನ್ ಖಾನ್..!

ಬಾಲಿವುಡ್ ಸಿನಿಮಾಗಳಿಗೆ ಎಂಟ್ರೀ ಕೊಡೋದೆ ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಗಾಡ್ ಫಾದರ್ ಇಲ್ಲದೇ ಬೆಳೆದು ಬಂದಿದ್ರು. ಇರ್ಫಾನ್ ಖಾನ್. ಹಿಂದಿಯಲ್ಲಿ ಮೊದಲಿಗೆ ಚಾಣಕ್ಯ, ಬನೇಗಿ ಅಪ್ನಿಬಾತ್, ಭಾರತ್ ಏಕ್ ಕೋಜ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಇರ್ಫಾನ್ ಖಾನ್ ಬಳಿಕ ಸಿನಿಮಾದತ್ತ ಮುಖ ಮಾಡಿದ್ರು. ಹಿಂದಿಯಲ್ಲಿ ಪ್ರಮುಖ ಚಿತ್ರಗಳಾದ ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ದಿ ಲಂಚ್ ಬಾಕ್ಸ್, ಗುಂಡೇ, ಪಿಕು, ಹಾಲಿವುಡ್ ನ ಲೈಫ್ ಆಫ್ ಪೈ ಸೇರಿ ಇನ್ನಿತರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಂಗ್ರೇಜಿ ಮೀಡಿಯಂ ಅವರ ನಟನೆಯ ಕೊನೆಯ ಸಿನಿಮಾವಾಗಿತ್ತು.

ಇರ್ಫಾನ್ 2018ರಿಂದ ಟ್ಯೂಮರ ಕ್ಯಾನ್ಸರ್ ನಿಂದ ಬಳಲುತಿದ್ದರು. ಇತ್ತೀಚೆಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದು ತಾಯ್ನಾಡಿಗೆ ಮರಳಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎನ್ನುವ ವೇಳೆಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ರು. ಇಂದು ಚಿಕಿತ್ಸೆ ಫಲಿಸದೇ ಇರ್ಫಾನ್ ಖಾನ್ ಇಹ ಲೋಕ ತ್ಯಜಿಸಿದ್ದು, ಬಾಲಿವುಡ್ ನಲ್ಲಿ ತಮ್ಮ 30 ವರ್ಷಗಳ ಸುದೀರ್ಘ ಸಿನಿ ಪಯಣವನ್ನು ಇರ್ಫಾನ್ ಖಾನ್ ಮುಗಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಕ್ ಧರಿಸಲು ಕಷ್ಟಪಟ್ಟ ದಕ್ಷಿಣ ಆಫ್ರಿಕಾ ಅಧ್ಯಕ್ಷ

Wed Apr 29 , 2020
ಜೋಹಾನ್ಸ್ ಬರ್ಗ: ದಕ್ಷಿಣ ಆಫ್ರಿಕಾದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾಸ್ಕ್ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಫುಲ್ ಟ್ರೋಲ್ ಆಗಿದ್ದಾರೆ.ಕೊರೊನಾ ಸೋಂಕು ತಡೆಯಲು ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೇ ೧ರ ನಂತರ ದೇಶದಲ್ಲಿ ಲಾಕ್‌ಡೌನ್ ಅನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗುವುದು ಎಂದು ಘೋಷಿಸಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.ತಮ್ಮ ಭಾಷಣ ಮುಗಿಯುತ್ತಿದ್ದಂತೆ ಮಾಸ್ಕ್ ಧರಿಸಲು ಮುಂದಾಗಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸಲಾಗದೆ ಕಷ್ಟಪಟ್ಟಿದ್ದಾರೆ. ಈ […]

Advertisement

Wordpress Social Share Plugin powered by Ultimatelysocial