ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಹಾಸ್ಯನಟ…!

ತೆಲುಗು ಚಿತ್ರರಂಗದ ಖ್ಯಾತ ಪೊಷಕರ ನಟಿಯರಲ್ಲೊಬ್ಬರಾದ ಪ್ರಗತಿ ಶಾಕಿಂಗ್ ವಿಷಯವನ್ನು ಹೊರಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ, ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ. ಕಿರುತೆರೆಯಲ್ಲಿಯೂ ಹೆಸರು ಮಾಡಿರುವ ಪ್ರಗತಿ ದೊಡ್ಡ ಹಾಸ್ಯ ನಟರೊಬ್ಬರ ಮೇಲೆ ಅಪಾದನೆ ಹೊರಿಸಿದ್ದಾರೆ. ಪ್ರಗತಿ ಹೇಳಿರುವ ವಿಷಯ ಪ್ರಸ್ತುತ ಸಂಚಲನ ಸೃಷ್ಟಿಸಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆ ಹಿರಿಯ ನಟ ಯಾರು ಎಂಬ ಚರ್ಚೆ ಆರಂಭವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತೆಲುಗು ಸಿನಿ ರಂಗದಲ್ಲಿ ಹೆಸರು ಮಾಡಿರುವ ಖ್ಯಾತ ಹಾಸ್ಯ ನಟ ನನ್ನೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿದ್ದರು. ಚಿತ್ರೀಕರಣ ನಡೆಯಬೇಕಾದರೆ ಒಮ್ಮೆ ಆತ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, ಆತನ ಮಾತುಗಳೂ ಸಹ ಅಸಭ್ಯವಾಗಿತ್ತು. ಆತನ ನಡತೆ ಮೊದಲಿನಂತೆ ಇರಲಿಲ್ಲ.  ಚಿತ್ರೀಕರಣ ಮುಗಿದ ಕೂಡಲೇ ಕ್ಯಾರಾವ್ಯಾನ್‌ ಗೆ ತೆರಳಿ, ನಿಮ್ಮ ಮಾತು, ನಿಮ್ಮ ವರ್ತನೆ ಸ್ವಲ್ಪವೂ ಸರಿಯಿಲ್ಲ, ಹೀಗೆ ಮಾಡಿದರೆ ಅದು ನಿಮ್ಮ ಘನತೆಗೆ ತಕ್ಕುದಾದುದಲ್ಲ, ಇನ್ನೊಮ್ಮೆ ನನ್ನ ಬಳಿ ಹೀಗೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದೆ. ಆ ಕ್ಷಣದಲ್ಲಿ ಅವರು ಮೌನವಾಗಿಬಿಟ್ಟರು. ಆ ಘಟನೆ ನಡೆದ ನಂತರ ಅದೇ ನಟ ನನ್ನ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹರಡಲು ಪ್ರಾರಂಭಿಸಿದ. ಪ್ರಗತಿಗೆ ದುರಹಂಕಾರ, ಆಕೆಗೆ ನಟನೆ ಬರುವುದಿಲ್ಲ ಎಂದು ಏನೇನೋ ಸುದ್ದಿಗಳನ್ನು ಹರಡಿಸಿದ. ಪ್ರಗತಿ ಹೇಳುತ್ತಿರುವ ಆ ಸ್ಟಾರ್ ಕಾಮಿಡಿಯನ್ ಯಾರು ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ತೆಲುಗು ಚಿತ್ರರಂಗದಲ್ಲಿ ಹಲವರು ಸ್ಟಾರ್ ಕಾಮಿಡಿಯನ್‌ಗಳಿದ್ದಾರೆ. ಬ್ರಹ್ಮಾನಂದ್, ಆಲಿ, ದಿವಂಗತ ವೇಣುಗೋಪಾಲ್, ಸಪ್ತಗಿರಿ, ವೆನ್ನಿಲ ಕಿಶೋರ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರಲ್ಲಿ ಯಾರೆಂಬ ಕುತೂಹಲ ಮೂಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಶ್ರೀದೇವಿ ಕೊನೆಯದಾಗಿ ನನ್ನನ್ನು ಅಪ್ಪಕೊಂಡಿದ್ದಳು

Tue May 5 , 2020
ನಟಿ ಶ್ರೀದೇವಿಯ ಸೌಂದರ್ಯಕ್ಕೆ ಕೋಟ್ಯಂತರ ಅಭಿಮಾನಿಗಳು. ಅವರು ಅಗಲಿದ್ದರೂ ಸಹ ಅವರ ಸೌಂದರ್ಯ ಕಣ್ಣಿನಿಂದ ಮರೆಯಾಗಿಲ್ಲ. ಶ್ರೀದೇವಿ ಅವರ ಸಿನಿ ಪಯಣದ ಆರಂಭದ ದಿನಗಳಲ್ಲಿ ಅವರ ಸೌಂದರ್ಯಕ್ಕೆ ಮಾರುಹೋದವರೆಷ್ಟೋ. ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ, ನಟ-ನಿರ್ದೇಶಕರೂ ಸಹ ಶ್ರೀದೇವಿ ಅವರ ಅಭಿಮಾನಿಗಳಾಗಿದ್ದರು. ಆದರೆ ಅಂತಹ ಸುರ ಸುಂದರಿಯನ್ನು ವಿವಾಹವಾಗುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದರೂ ಸಹ ಬೇಡ ಎಂದು ದೂರ ಸರಿದಿದ್ದರಂತೆ ಖ್ಯಾತ ನಟ ಕಮಲ್ ಹಾಸನ್. ಕಮಲ್ ಹಾಸನ್-ಶ್ರೀದೇವಿ […]

Advertisement

Wordpress Social Share Plugin powered by Ultimatelysocial