ಚಿಕ್ಕಮಗಳೂರು: ಕನ್ನಡ ಸಿನಿಮಾ ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಇಂದು ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಜಗ್ಗೇಶ್ ಹಾಗೂ ಕೋಮಲ್ ಇಂದು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡ ನಂತರ ಇದೇ ಸಂದರ್ಭ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೂ ಭೇಟಿ ನೀಡಿ ಗುರುಗಳ ದರ್ಶನವನ್ನು ಪಡೆದುಕೊಂಡರು. ಮಠದಲ್ಲೇ ಕೆಲ ಹೊತ್ತು ತಂಗಿದ್ದು, ಜಗದ್ಗುರುಗಳೊಂದಿಗೆ ಮಾತುಕತೆ ನಡೆಸಿದರು.
ನಟ ಜಗ್ಗೇಶ್ ಹಾಗೂ ಕೋಮಲ್ ರಂಭಾಪುರಿ ಮಠಕ್ಕೆ ಭೇಟಿ

Please follow and like us: