ನಾಳೆ ಕಂಪ್ಲೀಟ್ ಲಾಕ್‌ಡೌನ್

ಕೊರೊನಾ ಹಿನ್ನಲೆ ಫ್ರೀಡೌನ್ ಆಗಿದ್ದ ರಾಜ್ಯ ಮತ್ತೆ ನಾಳೆ ಲಾಕ್‌ಡೌನ್ ಆಗಲಿದೆ. ಇಂದು ಸಂಜೆಯಿAದಲೇ ಬೆಂಗಳೂರಿನ ಎಲ್ಲಾ ಏರಿಯಾಗಳು ಬಂದ್ ಆಗಲಿವೆ. ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ರಸ್ತೆಗಳನ್ನ ಬಂದ್ ಮಾಡಲಿದ್ದಾರೆ.  ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ ದಿನಸಿ ವಸ್ತುಗಳು, ಇವೆಲ್ಲದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಸಾರ್ವಜನಿಕ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಬೈಕು, ಕಾರು, ಟ್ಯಾಕ್ಸಿ, ಆಟೋ ಕೂಡ ರಸ್ತೆಗೆ ಇಳಿಯುವಂತಿಲ್ಲ. ಬೇಕಾಬಿಟ್ಟಿ ಓಡಾಡಿದ್ರೆ ಕೇಸ್ ಬೀಳೋದು ಗ್ಯಾರಂಟಿ. ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ವಿನಾಯ್ತಿ ಸಿಗಲಿದ್ದು, ಉಳಿದವರಿಗೆ ಸಂಜೆ ೭ಗಂಟೆಯಿAದ ಬೆಳಗ್ಗೆ ೭ಗಂಟೆಯವರೆಗೂ ಅಂದ್ರೆ ೩೬ಗಂಟೆಗಳ ಕಾಲ ಕರ್ಪ್ಯೂ ಜಾರಿಯಲ್ಲಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇಹ ದಾನ ಮಾಡಲು ಮುಂದಾದ ಯುವಕ

Sat May 23 , 2020
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ವಿರೇಶ್ ಕುರವತ್ತಿ ಎಂಬ ಯುವಕ ಕೊರೊನಾ ಸಂಬಂಧ ನಡೆಯುತ್ತಿರುವ ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾನೆ.ಯುವಕ ವಿರೇಶ್ ಕುರುವತ್ತಿ ನರಸಾಪುರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದು, ಎಬಿವಿಪಿ ಕಾರ್ಯಕರ್ತನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾನೆ.ದೇಶಕ್ಕಾಗಿ ತನ್ನಿಂದ ಏನಾದರೂ ಸೇವೆ ಮಾಡಲು ಮನಸ್ಸು ಹಂಬಲಿಸುತ್ತಿತ್ತು. ಕೊನೆ ಪಕ್ಷ ಕೊರೊನಾ ವೈರಸ್ ಔಷಧಿ ಪ್ರಯೋಗಕ್ಕಾದರೂ ನನ್ನ ದೇಹ […]

Advertisement

Wordpress Social Share Plugin powered by Ultimatelysocial