ನೀವು ಮಾಸ್ಕ್ ಧರಿಸಲ್ವಾ –ಕಸಗುಡಿಸುವ ಶಿಕ್ಷೆ ಅನುಭವಿಸಬೇಕಾಗುತ್ತೆ ಎಚ್ಚರ..!

ಮಡಗಾಸ್ಕರ್​ (ಪೂರ್ವ ಆಫ್ರಿಕಾ): ಕೊರೊನಾ ಹಿನ್ನಲೆ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಆಕಸ್ಮತ್ ಮಾಸ್ಕ್ ಧರಿಸದೇ ಹೊರ ಬಂದ್ರೆ ಕಸಗುಡಿಸೋ ಶಿಕ್ಷೆ ನೀಡಲಾಗುವುದು ಎಂದು ಪೂರ್ವ ಆಫ್ರಿಕ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಆದೇಶಿಸಿದ್ದಾರೆ. ರಾಜಧಾನಿ ಅಂಟಾನನರಿವೊದಲ್ಲಿ ಹಾಗೂ ಫಿಯಾನರಾಂಟ್ಸೊವಾ ಮತ್ತು ಟೊಮಾಸಿನಾ ನಗರಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿರು ಮಡಗಾಸ್ಕರ್‌ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿಯೋ ಅಥವಾ ಮಾಸ್ಕ್​ ಧರಿಸದೇ ಹೊರಗೆ ಬಂದವರಿಗೆ  ಕಸದ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಗುಡಿಸುವ ಕೆಲಸಕ್ಕೆ ತೊಡಗಿಸಲಾಗುತ್ತಿದೆ. ಅದೂ ಒಂದಿಷ್ಟು ಜಾಗವಲ್ಲ. ಪೊಲೀಸರು ಹೇಳಿದಂತೆ ಎಷ್ಟು ರಸ್ತೆಯನ್ನಾದರೂ ಗುಡಿಸಬೇಕಾಗುತ್ತದೆ. ಇಲ್ಲದಿದ್ದರೆ ಪೊಲೀಸರಿಂದ ‘ಬಿಸಿ ಬಿಸಿ ಕಜ್ಜಾಯ’ ತಿನ್ನಬೇಕಾಗುತ್ತದೆ. ಅಷ್ಟೇ ಅಲ್ಲ. ಶಿಕ್ಷೆ ಅನುಭವಿಸುವ ವ್ಯಕ್ತಿಯ ಫೋಟೋ ಹಾಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇಷ್ಟು ಸಾಕಲ್ಲವೆ ಮರ್ಯಾದೆ ತೆಗೆಯಲು. ಆದ್ದರಿಂದ ಮಾಸ್ಕ್​ ಹಾಕದೇ ಹೊರಬರಲು ಇಲ್ಲಿ ಜನರು ಹೆದರುತ್ತಿದ್ದಾರೆ.  ಈ ರೀತಿಯ ಶಿಕ್ಷೆ ಜಾರಿಗೆ ಮಾಡಿ ೨ದಿನ ಆಯ್ತು. ಅಂಟಾನನರಿವೊ ಮತ್ತು ಫಿಯಾನರಾಂಟ್ಸೋವಾದಲ್ಲಿ ಮಾಸ್ಕ್ ಇಲ್ಲದೆ ಹೊರಬಂದ ೫೦೦ ಮಂದಿ ರಸ್ತೆ ಗುಡಿಸುವ ಶಿಕ್ಷೆ ಅನುಭವಿಸಿದ್ದಾರೆ. ಶಿಕ್ಷೆಯೂ ಆಯಿತು, ನಗರದ ಸ್ವಚ್ಛತೆಯೂ ಆಯಿತು. ಕೊಟ್ಟರೆ ಇಂಥ ಶಿಕ್ಷೆ ಕೊಡಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

Please follow and like us:

Leave a Reply

Your email address will not be published. Required fields are marked *

Next Post

ಬಾಲಕನಿಗೆ ಬರ್ತ್ಡೇ ಸರ್‌ಪ್ರೈಸ್ ಕೊಟ್ಟ ಪೊಲೀಸರು

Tue Apr 28 , 2020
ಪುಣೆ: ಲಾಕ್‌ಡೌನ್ ನಡುವೆ ಪುಣೆ ಪೊಲೀಸರು ೧೫ ವರ್ಷದ ಹುಡುಗನ ಹುಟ್ಟುಹಬ್ಬ ಆಚರಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವತ್ಸಲ್ ಶರ್ಮಾ ಎನ್ನುವ ಬಾಲಕನ ತಂದೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಮೆರಿಕಾದಲ್ಲಿದ್ದಾರೆ. ತಾಂತ್ರಿಕ ಸಮಸ್ಯೆ ಕಾರಣ ತಮ್ಮ ಮಗನನ್ನ ಸಂಪರ್ಕಿಸಲಾಗದೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಪುಣೆ ಪೊಲೀಸರಿಗೆ ಇ-ಮೇಲ್ ಮಾಡಿ, ಮಗನಿಗೆ ಶುಭಾಶಯ ತಿಳಿಸುವಂತೆ ಕೇಳಿಕೊಂಡಿದ್ದರು. ತಂದೆಯ ಕೋರಿಕೆಗೆ ಸ್ಪಂದಿಸಿದ ಪೊಲೀಸರು ಮೊಬೈಲ್ ನಂಬರ್ ಮೂಲಕ ಮನೆಯನ್ನ ಪತ್ತೆ […]

Advertisement

Wordpress Social Share Plugin powered by Ultimatelysocial