ಪಶ್ಚಿಮ ಬಂಗಾಳಕ್ಕೆ ನೆರವಾದ ಪ್ರಧಾನಿ ಮೋದಿ

ನವದೆಹಲಿ:  ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಭಾರಿ ಹಾನಿಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನಕರ್​ ಮತ್ತು ಸಿಎಂ ಮಮತಾ ಬ್ಯಾರ‍್ಜಿ ಜತೆ ಹಾನಿಗೀಡಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.  ಹೆಲಿಕಾಪ್ಟರ್​ನಲ್ಲಿ ತೆರಳಿದ ಮೂವರು ಹಾನಿಗೀಡಾದ ಪ್ರದೇಶಗಳನ್ನು ಅವಲೋಕಿಸಿದರು. ಎರಡು ದಿನಗಳ ಹಿಂದೆ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಕೋಲ್ಕತಾ ಸೇರಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಇದರಿಂದಾಗಿ ೮೦ ಮಂದಿ ದುರಂತ ಸಾವಿಗೀಡಾಗಿದ್ದಾರೆ,ಅದಲ್ಲದೇ ಸಾಕಷ್ಟು ಆಸ್ತಿ ಹಾನಿಗೀಡಾಗಿದೆ ಜೊತೆಗೆ ಸಹಸ್ರಾರು ಮನೆಗಳು ಸಂಪರ‍್ಣ ಹಾನಿಗೊಂಡಿದ್ದು, ಮರಗಳು ಮತ್ತು ವಿದ್ಯುತ್​ ಕಂಬಗಳು ಬುಡಮೇಲಾಗಿ ಧರೆಗುರುಳಿವೆ. ಇವೆಲ್ಲವನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು. ಈ ಘಟನೆ ನಡೆಯುವಮುನ್ನ ಸರಣಿ ಟ್ವೀಟ್​ ಮಾಡಿದ್ದ ಪ್ರಧಾನಿಯವರು, ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ಪಶ್ಚಿಮ ಬಂಗಾಳದ ಜೊತೆಗಿದೆ ಎಂದು ಹೇಳಿದ್ದರು. ಅಂಫಾನ್ ಚಂಡಮಾರುತದಿಂದ ತೊಂದರೆಗೊಳಗಾದವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲಾಗುವುದು. ಇದರಿಂದ ಹಿಂಜರುಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಪ್ರಧಾನಿಯವರು ಹೇಳಿದಂತೆ ಸಹಾಯಹಸ್ತ ಚಾಚುವ ಮೂಲಕ ಅಂದಾಜು ೧ ಸಾವಿರ ಕೋಠಿ ರೂ.ಗಳ ನೆರವು ನೀಡುವುದಾಗಿ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಿಧಾನಪರಿಷತ್ ಚುನಾವಣೆ ಆರಂಭ

Fri May 22 , 2020
ಬೆಂಗಳೂರು: ಕೊರೊನಾ  ಆರ್ಭಟದ ನಡುವೆಯೂ ವಿಧಾನಪರಿಷತ್ ಚುನಾವಣೆ ಲಾಬಿ ತೀವ್ರಗೊಳ್ಳುತ್ತಿದೆ. ಕೊರೊನಾ ಕಾರಣದಿಂದ ಪರಿಷತ್ ಚುನಾವಣೆ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಗದಿತ ಅವಧಿಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಮೇಲ್ಮನೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊಂಡಿದೆ. ಜೂನ್ ತಿಂಗಳಲ್ಲಿ ಒಟ್ಟು 16 ಪರಿಷತ್ ಸ್ಥಾನಗಳ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಚುನಾಯಿತ ಸ್ಥಾನಗಳು 7 ಇದ್ದರೆ, 5 ನಾಮನಿರ್ದೇಶಿತ ಸ್ಥಾನಗಳಿವೆ. ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು 2 […]

Advertisement

Wordpress Social Share Plugin powered by Ultimatelysocial