ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಮಿಂಚಿದ್ದ ಶ್ರೀಲಂಕಾದ ವೇಗ ಬೌಲರ್ ಶೆಹಾನ್ ಮಧುಶಂಕ ಈಗ ಬೇರೊಂದು ಕಾರಣಕ್ಕಾಗಿ ಹೆಚ್ಚಿನ ಸುದ್ದಿಯಾಗಿದ್ದಾರೆ. ಹೆರಾಯಿನ್ ಪ್ರಕರಣವೊಂದರಲ್ಲಿ ಅವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭಾನುವಾರ ಶ್ರೀಲಂಕಾದ ಪನ್ನಾಲ ಪಟ್ಟಣದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗರೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಖಾಸಗಿ ವಾಹನದಲ್ಲಿ ಹೋಗುತ್ತಿದ್ದ ಮಧುಶಂಕ ಅವರನ್ನು ಪೊಲೀಸರು ತಡೆದಾಗ ಇದು ಬೆಳಕಿಗೆ ಬಂದಿದೆ. ಅವರ ಬಳಿ ಸುಮಾರು 2.5 ಗ್ರಾಮ್ಗಳಷ್ಟು ಹೆರಾಯಿನ್ ಇತ್ತು ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ, ಹಾಗೆಯೇ ಮಧುಶಂಕ ಅವರನ್ನು 2 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.