ಭಾರತದಲ್ಲಿ ಮನೆಮಾತಾಗಿದ್ದ ಖ್ಯಾತ ‘ಅಟ್ಲಾಸ್’ ಸೈಕಲ್ ತಯಾರಕಾ ಕಂಪನಿ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ಬಾಗಿಲು ಮುಚ್ಚಿದೆ. ಉತ್ತರ ಪ್ರದೇಶದ ಘಾಝಿಯಾಬಾದ್ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಭಾರೀ ನಷ್ಟದ ಹಿನ್ನೆಲೆಯಲ್ಲಿ ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ್ದರಿಂದ ಸಾವಿರಕ್ಕೂ ಹೆಚ್ಚು ಮಂದಿ ನೌಕರರು ಬೀದಿಗೆ ಬಂದಿದ್ದಾರೆ. ಭಾರತದ ಅತೀ ದೊಡ್ಡ ಸೈಕಲ್ ತಯಾರಿಕಾ ಕಂಪೆನಿ ಎಂದು ಹೆಸರು ಮಾಡಿದ್ದಅಟ್ಲಾಸ್ ದೇಶದ ಬಹುತೇಕ ಮನೆಗಳಲ್ಲಿ ಇತ್ತು. ಕೋವಿಡ್ 19 ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಕಂಪನಿಯನ್ನು ಮುಚ್ಚಲಾಗಿತ್ತು. ಜೂನ್ 1 ರಂದು ಕಂಪನಿಯನ್ನು ತೆರೆಯಲಾಗಿತ್ತು. ನೌಕರರು ಸಂಭ್ರಮದಿಂದಲೇ ಕೆಲಸಕ್ಕೆ ಹಾಜರಾಗಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ಕೆಲಸಕ್ಕೆ ಬೆಳಗ್ಗೆ ತೆರಳಿದಾಗ ಕಂಪನಿಯ ಮುಖ್ಯ ದ್ವಾರದಲ್ಲಿದ್ದ ನೋಟಿಸ್ ನೋಡಿ ಶಾಕ್ ಆಗಿದ್ದಾರೆ. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿಯನ್ನು ಮುಚ್ಚಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು. ನೋಟಿಸ್ ನೀಡದೇ ಕಂಪನಿಯನ್ನು ಮುಚ್ಚಲಾಗಿದೆ. ದಿಢೀರ್ ಬಂದ್ ಮಾಡಿದರೆ ನಾವು ಮುಂದೆ ಏನು ಮಾಡಬೇಕು ಎಂದು ನೌಕರರು ಕಣ್ಣೀರು ಹಾಕಿದ್ದಾರೆ. ನೌಕರರು ಈಗ ಕೋರ್ಟ್ ಮೊರೆ ಹೋಗಿದ್ದು, ಶುಕ್ರವಾರ ಅರ್ಜಿ ವಿಚಾರಣೆಗೆ ಬರಲಿದೆ.
ಪ್ರಸಿದ್ದ ಅಟ್ಲಾಸ್ ಕಂಪನಿ ಬಂದ್

Please follow and like us: