ಬಾಲಿವುಡ್ ಗೋಲ್ಡನ್ ಕಪಲ್ಸ್

ರಿಷಿ ಕಪೂರ್ ಎಂತಹ ಅದ್ಬುತ ನಟ. ಅವರಿಗೆ ಜೋಡಿಯಾಗಿ ನೀತು ಕಪೂರ್ ನಟಿಸಿದರೆ ಅಂದಿನ ಕಾಲಕ್ಕೆ ಆ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಇವರು ಗೋಲ್ಡನ್ ಕಪಲ್ಸ್ ಎನ್ನುತ್ತಿದ್ದರು. ಅಷ್ಟೊಂದು ಜನಪ್ರಿಯತೆ ಹೊಂದಿದ್ದರು ಈ ಇಬ್ಬರು ತಾರೆಯರು.
ರಿಷಿ ಕಪೂರ -ನೀತು ಕಪೂರ್ ಅವರ ಲವ್‌ಸ್ಟೋರಿಯು ಸಹಿತ ಸಿನಿಮಾ ತರಾನೆ ಇದೆ. ನೀತು ರೀಷಿ ಕಪೂರ್ ಜೊತೆ ೧೯೭೫ರ ವೇಳೆಗೆ ಸುಮಾರು ೧೫ ಸಿನಿಮಾಗಳಲ್ಲಿ ನಟಿಸಿದ್ರು, ಅಷ್ಟೊತ್ತಿಗಾಗಲೇ ಅವರ ಸ್ನೇಹ ಗಾಢವಗಿ ಬೆಳೆದಿತ್ತು. ನಂತರ ರೀಷಿ ಕಪೂರ್ ಕಭಿ-ಕಭಿ ಚಿತ್ರದ ಶೂಟಿಂಗ್‌ಗಾಗಿ ಪ್ಯಾರಿಸ್‌ಗೆ ಹೋದಾಗ ಅವರಿಗೆ ಒಂಟಿತನ ಕಾಡತೊಡಗಿತು. ನಂತರ ಅವರು ನೀತು ಕಪೂರ್‌ಗೆ ಟೆಲಿಗ್ರಾಂವೊAದನ್ನು ಬರೆದ್ರಂತೆ. ಅದರಲ್ಲಿ ನೀನು ನನಗೆ ತುಂಬಾ ನೆನಪಾಗ್ತಾ ಇದೀಯಾ ಎಂದು ಬರೆದಿದ್ರಂತೆ, ಅದನ್ನು ನೋಡಿದ ರಿಷಿ ಕಪೂರ್ ಪಾಮ್ ಚೋಪ್ರಾಗೆ ತೋರಸಿದ್ರಂತೆ. ಅಲ್ಲಿಂದ ಶುರುವಾದ ಅವರ ಪ್ರೇಮ ಕಹಾನಿ ಮುಂದೆ ೫ ವರ್ಷಗಳ ನಂತರ ವಿವಾಹಕ್ಕೆ ಬಂದು ನಿಂತಿತು.
ನೀತು ಕಪೂರ್ ರಿಷಿ ಕಪೂರ್ ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟು ಇರುತ್ತಿರಲಿಲ್ಲವಂತೆ ಇವರನ್ನು ಇಡಿ ಬಾಲಿವುಡ್ ಚಿತ್ರರಂಗ ಸುವರ್ಣ ಜೋಡಿ ಎಂದು ಕರೆಯುತ್ತಿತ್ತು. ರಿಷಿ ಕಪೂರ್ ೨ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಆದರೆ ನೀತು ರಿಷಿ ಕಪೂರ್ ಕಾಯಿಲೆಗೆ ಬಿದ್ದ ನಂತರವAತೂ ಅವರ ಬೆನ್ನೆಲುಬಾಗಿ ನಿಂತು ಅವರನ್ನು ಆರೈಕೆ ಮಾಡುತ್ತಿದ್ದರು. ಅವರು ಕೊನೆಯುಸಿರೆಳೆಯುವ ಕೊನೆಯ ಕ್ಷಣದವರೆಗೂ ನೀತು ಅವರನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಂಡಿದ್ದಾರೆ ಅದಕ್ಕೆ ಈ ಜೋಡಿ ಬೇರೆ ದಂಪತಿಗಳಿಗೂ ಮಾದರಿಯಾಗಿದ್ದು. ಸುವರ್ಣ ಜೋಡಿ ಎಂದು ಪ್ರಖ್ಯಾತಿಯಾಗಿದೆ. ರಿಷಿ ಕಪೂರ್‌ನನ್ನು ಕಳೆದುಕೊಂಡು ಬಾಲಿವುಡ್ ಚಿತ್ರರಂಗ ನೋವಿನಲ್ಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಕ್ಷೌರಿಕ ಹಾಗೂ ದಂತ ವೈದ್ಯ ವೃತ್ತಿಗೆ ಅವಕಾಶ ನೀಡಿ

Thu Apr 30 , 2020
ಬೆಂಗಳೂರು: ಕರೋನಾ ಬಿಕ್ಕಟ್ಟಿನ ಹಿನ್ನೆಲೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕ್ಷೌರಿಕ ಸಮುದಾಯ ಹಾಗೂ ದಂತ ವೈದ್ಯ ಸಮುದಾಯದವರು ಸುಗಮ ಜೀವನ ನಡೆಸಲು ಅನುವಾಗುವಂತೆ ಅವರು ವೃತ್ತಿ ಆರಂಭಿಸಲು ಅವಕಾಶ ನೀಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಈ ವೃತ್ತಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ನಿರ್ದೇಶನ ನೀಡುವ ಮೂಲಕ ವೃತ್ತಿ ಪುನರಾರಂಭಿಸಲು […]

Advertisement

Wordpress Social Share Plugin powered by Ultimatelysocial