ಬಾಲಿವುಡ್ ಜನಪ್ರಿಯ ನಟ ಇರ್ಫಾನ್ ಖಾನ್ ಇನ್ನಿಲ್ಲ

ಮುಂಬೈ: ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಾಲಿವುಡ್ ಜನಪ್ರಿಯ ನಟ ಇರ್ಫಾನ್ ಖಾನ್ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳತ್ತಿದ್ದ ಇವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ 54ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶ ಹಿನ್ನೆಲೆ  ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ನಿಧನ ನಮಗೆ ಆಘಾತವನ್ನುಂಟು ಮಾಡಿದೆ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಟ್ವೀಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಸ್ಪೆನ್ಸ್, ಥ್ರಿಲ್ಲರ್ ಆಧಾರಿತ ಬೈ ೧ ಗೆಟ್ ೧ ಫ್ರೀ

Wed Apr 29 , 2020
ಅವಳ-ಜವಳಿ ಅಂದ್ರೆನೆ ಫುಲ್ ಕನ್‌ಪ್ಯೂಶನ್ ನೊಡೋಕೆ ಇಬ್ರು ಒಂದೇ ತರಾನೇ ರ‍್ತಾರೆ. ಅಂತಹ ಒಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗ್ತಿದೆ. ಅವಳಿ-ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೊಂದಿರುವ ಚಿತ್ರ ಬೈ ೧ ಗೆಟ್ ೧ ಫ್ರೀ. ಇದು ಸಸ್ಪೆನ್ಸ್ ಮತ್ತು ಥ್ರೀಲರ್ ಆಧಾರಿತ ಸಿನಿಮಾ.  ಮೈಸೂರಿನ ಅವಳಿ-ಜವಳಿಗಳಾದ ಮಧು ಮಿಥುನ್ ಮತ್ತು ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್ ಈ ಚಿತ್ರದಲ್ಲಿ ಪ್ರಮುಖ […]

Advertisement

Wordpress Social Share Plugin powered by Ultimatelysocial