ಪಾರ್ಟಿಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ ನಂತರ ಕುಸಿದು ಬಿದ್ದ ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿ ನಾರಾಯಣ್ ಸೊಸೆ ಸುಹಾರಿಕ ರೆಡ್ಡಿ ಸಾವನ್ನಪ್ಪಿದ್ದಾರೆ. ಈ ನಿಗೂಢ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದ್ದಕ್ಕಿದ್ದಂತೆ ಸುಹಾರಿಕ ಬಿದ್ದು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಹೈದರಾಬಾದ್ ನ ಮೀನಾಕ್ಷಿ ಟವರ್ ನಲ್ಲಿ ಸುಹಾರಿಕ ಫ್ರೆಂಡ್ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಹಾರಿಕ ಸುಮಾರು ಒಂದು ಗಂಟೆಯವರೆಗೆ ಡಾನ್ಸ್ ಮಾಡಿದ್ದರಂತೆ. ಇವರ ಡಾನ್ಸ್ ನೋಡಿ ಅಲ್ಲಿದ್ದವರೇ ಆಶ್ಚರ್ಯಪಟ್ಟಿದ್ದಾರೆ. ಹೀಗೆ ಕುಣಿಯುತ್ತಲೇ ಕುಸಿದು ಬಿದ್ದಿದ್ದಾರೆ ಸುಹಾರಿಕ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಆಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಇನ್ನು ಈ ಸಂಬಂಧ ಮಧುಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಅಧ್ಯಕ್ಷರ ಸೊಸೆ ನಿಗೂಢ ಸಾವು..

Please follow and like us: