ಬಿಜೆಪಿ ವಿರುದ್ದ ಕ್ರಮಕ್ಕೆ ಕಾಂಗ್ರೆಸ್  ಒತ್ತಾಯ

ಬಿಜೆಪಿ ಶಾಸಕರು ಸರ್ಕಾರದ ಅನುದಾನದಲ್ಲಿ ಪೂರೈಸುವ ಆಹಾರ ಪೊಟ್ಟಣಗಳ ಮೇಲೆ ಭಾವಚಿತ್ರ ಹಾಗು ಪಕ್ಷದ ಚಿಹ್ನೆ ಮುದ್ರಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಸರ್ಕಾರದ ಅನುದಾನದಲ್ಲಿ ಪೂರೈಕೆ‌ ಮಾಡುವ ಆಹಾರ ಪೂರೈಕೆಯಲ್ಲಿ‌ ಈ ರೀತಿಯ ರಾಜಕೀಯ ಮಾಡಬಾರದು. ಸಿಎಂ ಕ್ರಮಕೈಗೊಳ್ಳಲು ಸೂಚಿಸದಿದ್ರೆ ಹೋರಾಟ ಅನಿವಾರ್ಯ. ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಪೌಷ್ಠಿಕ ಆಹಾರಗಳನ್ನು ಬಿಜೆಪಿ ಸಿಂಬಲ್​​ನಲ್ಲಿ ರೀ ಪ್ಯಾಕ್ ಮಾಡಿ ಹಂಚಿದವರ ವಿರುದ್ಧ ಸಿಎಂ ಯಡಿಯೂರಪ್ಪ ಕ್ರಮಕೈಗೊಳ್ಳಬೇಕು. ಇಲ್ಲದಿದ್ರೇ ಪ್ರಧಾನಿ ಮೋದಿ ಅವರಿಗೆ ಕಳಿಸೋದು ಅನಿವಾರ್ಯ ಆಗುತ್ತೆ. ಬಿಜೆಪಿ ಅಕ್ರಮವನ್ನು ಆಧಾರ ಸಮೇತ ಕಾಂಗ್ರೆಸ್ ನಾಯಕರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು

Please follow and like us:

Leave a Reply

Your email address will not be published. Required fields are marked *

Next Post

ಇನ್ನೂ ಬದುಕಿದ್ದಾನೆ ಕ್ರೂರಿ ಸರ್ವಾಧಿಕಾರಿ..!

Sat May 2 , 2020
ಉತ್ತರ ಕೊರಿಯಾ :ತೀವ್ರ ಅನಾರೋಗ್ಯ, ಜೀವನ್ಮರಣ ಹೋರಾಟ ಮತ್ತು ನಿಗೂಢ ಕಣ್ಮರೆ ಸುದ್ದಿಗಳಿಂದಾಗಿ ಭಾರೀ ಚರ್ಚೆಗೆ ಕಾರಣರಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಿಮ್ ಹಠಾತ್ ಪ್ರತ್ಯಕ್ಷರಾಗಿರುವುದರಿಂದ ಎಲ್ಲ ವದಂತಿಗಳು ಮತ್ತು ಊಹಾಪೋಹಾಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ಮೂರು ವಾರಗಳಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಬಗ್ಗೆ ಕೆಲವು ಸುದ್ದಿಗಳು ವ್ಯಾಪಕವಾಗಿ ಹಬ್ಬಿತ್ತು. ಅವರು ಸರ್ಜರಿಗೆ ಒಳಗಾದ ಬಳಿಕ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಒಂದು […]

Advertisement

Wordpress Social Share Plugin powered by Ultimatelysocial