ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ ಮಧ್ಯೆ ತಮಿಳುನಾಡಿನ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದಾರೆ. ಕೊಯಮತ್ತೂರಿನ ಟೀ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಹೆಂಡತಿ, ಮಕ್ಕಳನ್ನು ಮನೆಗೆ ತಲುಪಿಸಲು ಬೈಕ್ ಕದ್ದಿದ್ದಾನೆ. ಎರಡು ವಾರಗಳ ನಂತ್ರ ಬೈಕ್ ಪಾರ್ಸಲ್ ಮಾಡಿದ್ದಾನೆ. ವ್ಯಕ್ತಿ ಉದ್ಯಮಿಯೊಬ್ಬರ ಬೈಕ್ ಕದ್ದಿದ್ದ. ಪಾರ್ಸಲ್ ಕಂಪನಿ ಸುರೇಶ್ ಕುಮಾರ್ ಗೆ ಕರೆ ಮಾಡಿದಾಗ ಆತ ಆಶ್ಚರ್ಯಕ್ಕೊಳಗಾಗಿದ್ದ. ಬೈಕ್ ಕದ್ದ ವ್ಯಕ್ತಿ ಪೇ ಆನ್ ಡೆಲಿವರಿ ಆಯ್ಕೆ ಆಯ್ದುಕೊಂಡಿದ್ದ. ಹಾಗಾಗಿ ಪಾರ್ಸಲ್ ಕಂಪನಿ ಬೈಕ್ ಮಾಲೀಕನಿಗೆ ಕರೆ ಮಾಡಿತ್ತು. ಸಿಸಿ ಟಿವಿಯಲ್ಲಿ ಬೈಕ್ ಕದ್ದ ದೃಶ್ಯ ಸೆರೆಯಾಗಿದೆ. ಆತ ಟೀ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಎಂಬುದು ಗೊತ್ತಾಗಿದೆ. ಬೈಕ್ ವಾಪಸ್ ಮಾಡಿದ್ದಕ್ಕೆ ಮಾಲೀಕ ಖುಷಿ ವ್ಯಕ್ತಪಡಿಸಿದ್ದಾನೆ.
ಬೈಕ್ ಕದ್ದವನ ಪ್ರಾಮಾಣಿಕತೆ ಮೆಚ್ಚಲೇ ಬೇಕು ….

Please follow and like us: