ಮಕ್ಕಳಿಗಾಗಿ ಹೊಸ ಮೇಸೆಂಜರ್ ಕಿಡ್ಸ್

ದೆಹಲಿ: ಕೊರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿಯೇ ಇರುತ್ತಿದ್ದಾರೆ. ಈ ವೇಳೆ ಮಕ್ಕಳಿಗೆ ಹೊಸತನ್ನು ಕಲಿಯಲು ಸಹಕಾರವಾಗಲಿ ಎಂಬ ಉದ್ದೇಶದಿಂದ ಸೋಷಿಯಲ್ ಮೀಡಿಯಾದ ದಿಗ್ಗಜ ಎಂದೇ ಹೆಸರಾದ ಫೇಸ್‌ಬುಕ್, ಮಕ್ಕಳಿಗಾಗಿಯೇ ವಿಶೇಷವಾಗಿ ಮೆಸೆಂಜರ್ ಕಿಡ್ಸ್ ಆ್ಯಪ್ ಲಾಂಚ್ ಮಾಡಿದೆ. ಭಾರತ ಸೇರಿದಂತೆ ೭೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಮೊದಲು ಮಕ್ಕಳಿಗೆ ಬರುವ ಫ್ರೆಂಡ್ ರಿಕ್ವೆಸ್ಟ್ ಸೇರಿದಂತೆ ಇತರೆ ಯಾವುದೇ ವಿಷಯಗಳಿದ್ದರೂ ಪೋಷಕರೇ ನಿಭಾಯಿಸುತ್ತಿದ್ದರು. ಆದ್ರೀಗ, ಈ ಕಿಡ್ಸ್ ಮೆಸೆಂಜರ್ ಆ್ಯಪ್ ಮೂಲಕ ಮಕ್ಕಳು ತಮ್ಮ ಫ್ರೆಂಡ್ ರಿಕ್ವೆಸ್ಟ್, ಗ್ರೂಪ್ ಚಾಟ್ ಸೇರಿದಂತೆ ಯಾವುದು ಬೇಕು, ಯಾವುದು ಬೇಡವೆಂಬುದನ್ನು ತಾವೇ ನಿರ್ಧರಿಸಬಹುದು. ಇದರ ಪ್ರತಿ ನೊಟಿಫಿಕೇಷನ್ ಪೋಷಕರಿಗೆ ಬರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ. ಅಷ್ಟೇ ಅಲ್ಲ, ಪೋಷಕರು ಸಹ ತಮ್ಮ ಮಕ್ಕಳಿಗೆ ಕೋಚಿಂಗ್, ಶಿಕ್ಷಕರು ಸೇರಿದಂತೆ ಕಲಿಕೆಯ ಕುರಿತು ದೊಡ್ಡವರೊಂದಿಗೆ ಗ್ರೂಪ್ ಚಾಟ್ ಮಾಡಲು ಅನುಮತಿ ನೀಡುವುದು, ಮಕ್ಕಳ ಪ್ರೊಫೈಲ್ ಪಿಕ್, ನೇಮ್ ವಿಸಿಬಲ್ ಸೇರಿದಂತೆ ಅನೇಕ ಬದಲಾವಣೆಯನ್ನು ಸಹ ಮಾಡುವ ಅವಕಾಶವಿದೆ. ಮಕ್ಕಳು ಇದನ್ನ ನಿಭಾಯಿಸುತ್ತಿದ್ದರೂ, ಪೋಷಕರಿಗೂ ಸಹ ಈ ಮೆಸೆಂಜರ್ ಕಿಡ್ಸ್ ಆ್ಯಪ್ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತದೆ. ಹೀಗಾಗಿ, ಯಾವುದೇ ಬದಲಾವಣೆಯಾದರೂ ಅದರ ಪ್ರತಿಯೊಂದು ಮಾಹಿತಿ ತಂದೆ-ತಾಯಿಯ ಗಮನಕ್ಕೆ ಬರುವುದರಿಂದ ಅಪಾಯವಿಲ್ಲ ಅಂತ ಸಂಸ್ಥೆ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ

Thu Apr 23 , 2020
ಸಿಲಿಕಾನ್ ಸಿಟಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ಬೇಗೂರಿನಲ್ಲಿ ಖಾಸಗಿ ಕಂಪನಿ ಗೋದಾಮಿನಲ್ಲಿ  ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸೆರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ತಗುಲಿದ್ದು, ಬಿಸಿಲು ಕಾಲ ಆಗಿರೋಂದ್ರಿದ್ದ ಭಾರೀ ಪ್ರಮಾಣದಲ್ಲಿ ಬೆಂಕಿಯ ಹಾವರಿಸಿದೆ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿರೋ  ಅಗ್ನಿಶಾಮಕ ದಳದ ಸಿಬ್ಬಂದಿ .ಬೇಗೂರು ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಅಂತ ಅಂದಾಜಿಸಲಾಗಿದೆ..   Please […]

Advertisement

Wordpress Social Share Plugin powered by Ultimatelysocial