ರೈತರಿಗೆ ಬ್ಯಾಂಕುಗಳು ಕಹಿಸುದ್ದಿಯನ್ನ ನೀಡಿದ್ದು, ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲು ಹಿಂದಿನ ಬಾಕಿಯನ್ನ ಮೇ ೩೧ರೊಳಗಾಗಿಯೇ ಮರುಪಾವತಿಸಬೇಕೆಂದು ಸಹಕಾರಿ ಬ್ಯಾಂಕುಗಳು ರೈತರಿಗೆ ತಿಳಿಸಿವೆ. ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ರೈತರು ಕೃಷಿ ಸಾಲವನ್ನು ಕಟ್ಟಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದಲ್ಲಿ ಕೇಂದ್ರ ಸರಕಾರದ ಪಾಲನ್ನು ರಾಜ್ಯ ಸರಕಾರ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತಪರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ.
ಮೇ ೩೧ರೊಳಗೆ ರೈತರ ಸಾಲ ಮರುಪಾವತಿ

Please follow and like us: