ಯಶ್ ಪುತ್ರನ ಪೋಟೋ ರಿವೀಲ್

ಲಾಕ್ ಡೌನ್ ನಡುವೆ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.ಇಂದು ಜೂನಿಯರ್ ರಾಕಿಭಾಯ್ ದರ್ಶನವಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಯ ಎರಡನೆ ಪುತ್ರ ಹೇಗಿದ್ದಾನೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದುವರೆಗೂ ಯಶ್ ದಂಪತಿ ಪುತ್ರನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೀಗ ಅಭಿಮಾನಿಗಳಿಗೆ ಮುದ್ದಿನ ಮಗನನ್ನು ದರ್ಶನ ಮಾಡಿಸಲು ಸಜ್ಜಾಗಿದ್ದಾರೆ.ಇಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಾಗಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗಳ ಜೊತೆ ಪುತ್ರನ ಅರ್ಧ ಮುಖವನ್ನು ಮಾತ್ರ ರಿವೀಲ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಲಾಕ್ ಡೌನ್ ನಡುವೆ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಜೂನಿಯರ್.ಯಶ್ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅಂದ ಹಾಗೇ ಏಪ್ರಿಲ್ 30ಕ್ಕೆ ಯಶ್ ಪುತ್ರನಿಗೆ 6 ತಿಂಗಳು ತುಂಬಿದೆ. ಈ ಸಂತಸದಲ್ಲಿ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸುತ್ತಿದ್ದಾರೆ ರಾಕಿಂಗ್ ದಂಪತಿ. “ನೀವೆಲ್ಲರು ಕಾತರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಪುತ್ರನಿಗೆ 6 ತಿಂಗಳು ತುಂಬಿದೆ. ನಿಮ್ಮೆಲ್ಲರಿಗೂ ಶುಭಾಶಯ ಹೇಳಲು ಸಿದ್ಧನಾಗಿದ್ದಾನೆ. ನೀವು ರೆಡಿನಾ” ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಪುತ್ರ ಹೇಗಿದ್ದಾನೆ ಎನ್ನುವ ಕುತೂಹಲಕ್ಕೆ ಇಂದು ಬ್ರೇಕ್ ಹಾಕಲಿದ್ದಾರೆ ರಾಂಕಿಂಗ್ ದಂಪತಿ. ಇನ್ನೂ ಮೊದಲ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಮಗನ ಹೆಸರು ಏನಾಗಿರಲಿದೆ ಕುತೂಹಲ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಜನನ ಪ್ರಮಾಣ ಪತ್ರದಲ್ಲಿ ಜಾತಿ, ಧರ್ಮದ ಕಾಲಂ ತೆಗೆದು ಹಾಕುವಂತೆ ಮನವಿ

Thu Apr 30 , 2020
ಹೈದರಾಬಾದ್: ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ಮತ್ತು ಪತ್ರಕರ್ತೆಯಾಗಿರುವ ಅವರ ಪತ್ನಿ ಸಂದೇಪಗು ಸ್ವರೂಪಾ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳಲು ಅರ್ಜಿ ನಮೂನೆಗಳಲ್ಲಿ ‘ಯಾವುದೇ ಧರ್ಮ, ಜಾತಿ ಇಲ್ಲ’ ಎಂಬ ಕಾಲಂ ಸೇರಿಸಬೇಕೆಂದು ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ತೆಲಂಗಾಣದ ದಂಪತಿ ಇದರಿಂದಾಗಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಜನರ ಆಲೋಚನೆಯನ್ನು ಬದಲಾಯಿಸುತ್ತದೆ ಎಂದು ಈ […]

Advertisement

Wordpress Social Share Plugin powered by Ultimatelysocial