ವಲಸಿಗರ ಪ್ರವೇಶಕ್ಕೆ ನಿರ್ಬಂಧ

ನವದೆಹಲಿ:  ಕೊರೊನಾ ವೈರಸ್ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅಮೆರಿಕದ ನಾಗರಿಕರ ಉದ್ಯೋಗ ರಕ್ಷಣೆಗಾಗಿ ವಲಸಿಗರ ಪ್ರವೇಶಕ್ಕೆ ಡೊನಾಲ್ಟ್ ಟ್ರಂಪ್ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ. ಕೊವಿಡ್‌ನ ದಾಳಿ ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಅಮೆರಿಕಾದ ಪ್ರಜೆಗಳ ಉದ್ಯೋಗ ಕಾಪಾಡುವುದು ಅವಶ್ಯವಾಗಿದೆ. ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕಾರ್ಯದ ಆದೇಶಕ್ಕೆ ಸಹಿ ಮಾಡಲಿದ್ದೇನೆ ಎಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಕಳೆದ ತಿಂಗಳಿನಿಂದ ೨.೨ ಕೋಟಿ ಅಮೆರಿಕನ್ನರು ನಿರುದ್ಯೋಗ ಸೌಲಭ್ಯಗಳನ್ನು ಬಯಸಿದ್ದಾರೆ. ೧೦ ಲಕ್ಷಜನರು ಏಪ್ರೀಲ್‌ನಲ್ಲಿ ಮನವಿ ಸಲ್ಲಿಸಲು ಅಣಿಯಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಡುವೆ ಆರ್ಥಿಕತೆಗೆ ಪುಷ್ಠಿ ನೀಡಲು ಅನೇಕ ಕ್ರಮಗಳಿಗೆ ಅಮೆರಿಕಾ ಮುಂದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸೋಂಕು ನಿವಾರಕ ಸಿಂಪಡಣೆ ಅಪಾಯಕಾರಿ

Tue Apr 21 , 2020
  ನವದೆಹಲಿ: ರಾಸಾಯನಿಕ ಸೋಂಕು ನಿವಾರಕಗಳ ಸಿಂಪಡಣೆಯಿಂದ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾಗಬಹುದು ಎಂದು ಕೇಂದ್ರ ಆರೋಗ್ಯ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಕೋರೊನಾ ತಡೆಗಟ್ಟುವ ಉದ್ದೇಶದಿಂದ ದೇಶದ ಅನೇಕ ಪ್ರದೇಶಗಳ ತರಕಾರಿ ಮಾರುಕಟ್ಟೆ, ಸರಕಾರಿ ಆಸ್ಪತ್ರೆಗಳಲ್ಲಿ ರೋಗನಿರೋಧಕ ಸುರಂಗಗಳನ್ನು ಸ್ಥಾಪಿಸಿರುವ ಸಂದರ್ಭದಲ್ಲಿ ಸಚಿವಾಲಯ ಈ ಎಚ್ಚರಿಕೆ ನೀಡಿದೆ. ಈ ರೀತಿಯಾಗಿ ಸೋಂಕು ನಿವಾರಕಗಳ ಸಿಂಪಡಣೆ ಮಾಡುವುದರಿಂದ ಜನರಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎನ್ನುವ ತಪ್ಪು ಕಲ್ಪನೆಯನ್ನು ಮೂಡಿಸುತ್ತದೆ. […]

Advertisement

Wordpress Social Share Plugin powered by Ultimatelysocial