ವಿಚಿತ್ರ ಆದ್ರೂನು ಇದು ಸತ್ಯನೆ

ಕೊಲಂಬಿಯಾ:: ಕೊಲಂಬಿಯಾದ ಟ್ರಾನ್ಸ್​ಜೆಂಡರ್​ವೊಬ್ಬರು ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ.   ಟ್ರಾನ್ಸ್​ಜೆಂಡರ್​ ಮಾಡೆಲ್​ವೊಬ್ಬರು ‘ಗರ್ಭಿಣಿ’ಯಾಗಿರುವ ತನ್ನ ಗಂಡನ ಹೊಟ್ಟೆಗೆ ಖುಷಿಯಿಂದ ಮುತ್ತು ನೀಡುವ ಹೃದಯಸ್ಪರ್ಶಿ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿದ್ದಾರೆ. ಅಂದ ಹಾಗೆ ಟ್ರಾನ್ಸ್​ಜೆಂಡರ್ ಆಗಿರುವ ಈ ವ್ಯಕ್ತಿಗೆ ಈಗ 8 ತಿಂಗಳು.ಡನ್ನಾ ಸುಲ್ತಾನಾ ಮತ್ತು ಈಸ್ಟ್​ಬನ್​​ ಲಾಂಡ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಜೋಡಿ.

ಜನಿಸಿದಾಗ ಹೆಣ್ಣಾಗಿದ್ದು ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ ಈಸ್ಟ್​​ಬನ್​ ಲಾಂಡ್ರೋ ತಾಯ್ತನದ ಎಲ್ಲ ಖುಷಿಯನ್ನು ಅನುಭವಿಸುತ್ತಿದ್ದಾರೆ.2 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇರುವ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಡೆಲ್​ ಡನ್ನಾ ಸುಲ್ತಾನಾ ಹೃದಯ ತಟ್ಟುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘Love Is Love’ ಎಂಬ ಹ್ಯಾಶ್​ಟ್ಯಾಗ್​​ನಿಂದ ಈ ಖುಷಿಯ ವಿಷಯವನ್ನು ಡನ್ನಾ ಶೇರ್​ ಮಾಡಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ ಈಸ್ಟ್​​ಬನ್​​ ಲಾಂಡ್ರೋ ಸಹಜ ರೀತಿಯಲ್ಲೇ ಗರ್ಭ ಧರಿಸಿದ್ದಾರೆ ಅನ್ನೋದು.8 ತಿಂಗಳಾಗುತ್ತಿದ್ದಂತೆ ಈಸ್ಟ್​​ಬನ್​ ಅವರನ್ನು ಡನ್ನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭದಲ್ಲಿರುವ ಮಗುವಿನ ಗಾತ್ರ ಸ್ವಲ್ಪ ದೊಡ್ಡದಿದೆ. ನೀವು ಆತಂಕಪಡಬೇಕಿಲ್ಲ ಎಂದು ಈ ಜೋಡಿಗೆ ವೈದ್ಯರು ಧೈರ್ಯ ಹೇಳಿದ್ದಾರೆ. ಮನೆಗೆ ಮರಳಿರುವ ಈ ಜೋಡಿ ಈಗ ಖುಷಿಯ ದಿನಕ್ಕಾಗಿ ಕಾಯುತ್ತಿದೆ. ತಮ್ಮ ಕುಟುಂಬ ಸದಸ್ಯರಿಗೂ ಈ ವಿಚಾರ ತಿಳಿಸಿರುವ ಡನ್ನಾ ಮತ್ತು ಈಸ್ಟ್​​ಬನ್​​ ಪುಟ್ಟ ಕಂದನ ಸ್ವಾಗತಕ್ಕೆ ಸಜ್ಜಾಗಿ ಎಂದು ಹೇಳಿದ್ದಾರೆ. ಹುಟ್ಟುವ ಗಂಡು ಮಗುವಿಗೆ ಈಗಾಗಲೇ ಹೆಸರನ್ನೂ ಇಟ್ಟಿದ್ದಾರೆ. ನಾವು ಮಗನನ್ನು ‘ಏರಿಯಲ್’​​ ಎಂದು ಕರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಲಸಿಕೆ ಅನ್ವೇಷಣೆಯಲ್ಲಿ ೩೦ಭಾರತೀಯ ಸಂಸ್ಥೆಗಳು

Thu May 28 , 2020
ಲಸಿಕೆ ಮತ್ತು ಔಷಧಿಯಿಂದ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಗೆಲ್ಲಬಹುದು. ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಹಾಗೂ ಔಷಧ ಉದ್ಯಮ ಸಂಸ್ಥೆಗಳು ಬಹಳ ಪ್ರಬಲವಾಗಿವೆ ಎಂದು ನೀತಿ ಆಯೋಗದ ಆರೋಗ್ಯ ವಲಯದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ  ಭಾರತದಲ್ಲಿ ದೊಡ್ಡ ಉದ್ಯಮಗಳಿಂದ ಹಿಡಿದು ವೈಯಕ್ತಿಕ ಶಿಕ್ಷಣ ತಜ್ಞರವರೆಗೆ ಸುಮಾರು ೩೦ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ೩೦ ಸಂಸ್ಥೆಗಳಲ್ಲಿ ಸರಿ ಸುಮಾರು […]

Advertisement

Wordpress Social Share Plugin powered by Ultimatelysocial