ಬೆಂಗಳೂರು: ಕೊರೊನಾ ಆರ್ಭಟದ ನಡುವೆಯೂ ವಿಧಾನಪರಿಷತ್ ಚುನಾವಣೆ ಲಾಬಿ ತೀವ್ರಗೊಳ್ಳುತ್ತಿದೆ. ಕೊರೊನಾ ಕಾರಣದಿಂದ ಪರಿಷತ್ ಚುನಾವಣೆ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಗದಿತ ಅವಧಿಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಮೇಲ್ಮನೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊಂಡಿದೆ. ಜೂನ್ ತಿಂಗಳಲ್ಲಿ ಒಟ್ಟು 16 ಪರಿಷತ್ ಸ್ಥಾನಗಳ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಚುನಾಯಿತ ಸ್ಥಾನಗಳು 7 ಇದ್ದರೆ, 5 ನಾಮನಿರ್ದೇಶಿತ ಸ್ಥಾನಗಳಿವೆ. ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು 2 ಹಾಗೂ ಶಿಕ್ಷಕರ ಕ್ಷೇತ್ರಗಳ ಸ್ಥಾನಗಳು ಖಾಲಿಯಾಗಲಿವೆ.
ವಿಧಾನಪರಿಷತ್ ಚುನಾವಣೆ ಆರಂಭ

Please follow and like us: