ವಿಶೇಷ ಮಾಸ್ಕ್ ತಯಾರಿಕೆ ಮಾಸ್ಕ್ನಲ್ಲಿ ಸ್ಪೀಕರ್ ಮೈಕೂ ಇದೆ

ಕೊರೊನಾ ಬಂದ ಮೇಲೆ ಮಾಸ್ಕ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹತ್ತು ರೂಪಾಯಿಂದ ಹಿಡಿದು ಸಾವಿರ ರೂಪಾಯಿವರೆಗಿನ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇದಿಷ್ಟೆ ಅಲ್ಲದೆ ಜನರು ಮನೆಯಲ್ಲಿಯೆ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಉಪಯೋಗ ಮಾಡ್ತಿದಾರೆ. ಇದರ ನಡುವೆ ಇಂಜಿನಿಯರ್ ಪದವಿಧರನೊಬ್ಬ ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ಮಾಸ್ಕ್ ತಯಾರಿಸಿದ್ದಾನೆ. ಕೊರೊನಾ ಹಾವಳಿಯಿಂದ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ಆದೇಶ ಹೊರಡಿಸಿತ್ತು. ಅದರಂತೆ ಸಾರ್ವಜನಿಕರು ಸಹ ತಮಗೆ ಅನುಕೂಲ ಹಾಗೂ ತಮ್ಮ ಆರ್ಥಿಕತೆ ನೋಡಿಕೊಂಡು ಮಾಸ್ಕ್ ಕೊಂಡುಕೊಳ್ಳುತ್ತಿದ್ದಾರೆ. ಇನ್ನು ಮನೆಯಲ್ಲೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಸಾಮಾನ್ಯ ಸ್ಮಾರ್ಟ್ ಮಾಸ್ಕ್ ತಯಾರಿಸಬಹುದು ಎಂಬುದನ್ನು ನವನಗರದ ಇಂಜಿನಿಯರಿAಗ್ ಪದವೀಧರ ಶ್ರೀನಿವಾಸ್ ಪರಡ್ಡಿ ತೋರಿಸಿಕೊಟ್ಟಿದ್ದಾನೆ. ಸಾಮಾನ್ಯವಾಗಿ ಮಾಸ್ಕ್ ಧರಿಸಿದಾಗ ಉಂಟಾಗುವ ಸಂವಹನ ಕೊರತೆ ನೀಗಿಸುವ ಕಾರಣಕ್ಕೆ ಶ್ರೀನಿವಾಸ್ ಈ ಮಾಸ್ಕ್ಗೆ ಸ್ಪೀಕರ್ ಹಾಗೂ ಮೈಕ್ ವ್ಯವಸ್ಥೆ ಮಾಡಿದ್ದಾರೆ. ಸೋಂಕು ತಗಲದಂತೆ ಸುರಕ್ಷತಾ ಕ್ರಮಗಳ ಜತೆಗೆ ಅಗತ್ಯ ಪರಿಕರಗಳ ಜೋಡಣೆ ಮಾಡಲಾಗಿದೆ. ಇದರ ವಿಶೇಷತೆ ಎಂದರೆ ಸ್ಮಾರ್ಟ್ ಮಾಸ್ಕ್ ತಯಾರಿಕೆಗೆ ಸ್ಪೀಕರ್, ಮೈಕ್, ಉಸಿರಾಟ, ಸಂವಹನ, ಫಿಲ್ಟರ್ ಕಾರ್ಯಗಳು ಮಾಡುವುದರ ಜೊತೆಗೆ ಎಲ್ಲ ರೀತಿಯಿಂದಲು ಸುರಕ್ಷಿತವಾಗಿ ಕಾಪಾಡಲಿದೆ. ಶಾಶ್ವತ್ ಮಾಸ್ಕ್ ಇದಾಗಿದ್ದು, ಎಲ್ಲರಿಗೂ ಅನುಕೂಲವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಾರ್ವಜನಿಕರಿಗೆ ಲಾಕ್ ಡೌನ್ ನಿಂದ ರಿಲೀಫ್..

Sat May 30 , 2020
ಸರ್ಕಾರ ಸಾರ್ವಜನಿಕರಿಗೆ ಗುಡ್‌ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ನಾಳೆ ಕಂಪ್ಲೀಟ್ ಲಾಕ್‌ಡೌನ್ ಇರುವುದಿಲ್ಲ. ರಾಜ್ಯದ ಜನತೆಯ ಬೇಡಿಕೆಯ ಮೇರೆಗೆ ಲಾಕ್‌ಡೌನ್‌ನ್ನ ಸಂಪೂರ್ಣವಾಗಿ ರಿಲೀಫ್ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಎಂದಿನAತೆ ದೈನಂದಿನ sಚಟುವಟಿಕೆ, ಮಾರ್ಕೆಟ್, ಶಾಪ್ ಎಲ್ಲವೂ ಓಪನ್ ಇರುತ್ತದೆ ಎಂದರು.  ಲಾಕ್‌ಡೌನ್ ಘೋಷಣೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್‌ಡೌನ್ ಎಂದು ಘೋಷಿಸಲಾಗಿತ್ತು ಆದರೆ ಈ ಭಾನುವಾರ ಸರ್ಕಾರ ಜನರಿಗೆ ಬಿಗ್ ರಿಲೀಪ್ […]

Advertisement

Wordpress Social Share Plugin powered by Ultimatelysocial