ಶಾಲಾ – ಕಾಲೇಜು ಆರಂಭ ಮಾಡುವ ವೇಳೆ ಪಾಲಿಸಬೇಕಿದೆ ಈ ‘ಶಿಸ್ತು’

ಕರೋನಾ ಮಹಾಮಾರಿ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಕಳೆದ ನಲವತ್ತು ದಿನಗಳಿಗೂ ಅಧಿಕ ಕಾಲದಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಕರೋನಾ ಸೋಂಕಿನ ಆರ್ಭಟ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆಯೂ ಶಾಲಾ-ಕಾಲೇಜು ಆರಂಭದ ಕುರಿತ ಮಾತುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಬಹುತೇಕ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕರೋನಾ ಸೋಂಕಿನ ಅಪಾಯದ ಅರಿವಿದ್ದರೂ ದೊಡ್ಡವರೇ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ಇನ್ನು ಚಿಕ್ಕವರಿಂದ ಇದು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಒಂದೊಮ್ಮೆ ಸರಕಾರ ಶಾಲಾ – ಕಾಲೇಜುಗಳನ್ನು ಆರಂಭಿಸಲು ಮುಂದಾದರೆ ಇದೇ ರೀತಿಯ ಶಿಸ್ತು ಪಾಲಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಲಾಗುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಶಾಲಾ – ಕಾಲೇಜು ಆರಂಭಕ್ಕೆ ಸರ್ಕಾರ ಯಾವುದೇ ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದೂ ಹೇಳಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ 36 ಜನರಿಗೆ ಕೊರೊನಾ ಪತ್ತೆ

Sat May 9 , 2020
ರಾಜ್ಯದಲ್ಲಿ  ಇಂದು ಹೊಸದಾಗಿ 36 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಈ ಕುರಿತು  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ  ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ ದಾವಣಗೆರೆ 06, ಬೆಂಗಳೂರು 12, ತುಮಕೂರು 01, ವಿಜಯಪುರ 01, ಬೀದರ್ 02, ದಕ್ಷಿಣ ಕನ್ನಡ 03, ಉತ್ತರ ಕನ್ನಡ 07, ಚಿತ್ರದುರ್ಗ ಮೂವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನೂ […]

Advertisement

Wordpress Social Share Plugin powered by Ultimatelysocial