ನವದೆಹಲಿ: ದೇಶಾದ್ಯಂತ ವಲಸೆ ಕಾಮಿರ್ಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳಲ್ಲಿ ಈವರೆಗೆ 80 ಜನರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ತಿಳಿಸಿದೆ. ದೇಶದ ವಿವಿಧ ಭಾಗಗಳಿಂದ ಮೇ 1ರಿಂದ ಮೇ 27ರವರೆಗೆ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳನ್ನು ಬಿಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ದೇಶಾದ್ಯಂತ 3,870 ರೈಲುಗಳು ಸಂಚರಿಸಿವೆ. ಇದರಲ್ಲಿ ಅಂದಾಜು 50 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳಿದ್ದಾರೆ. ಮೇ 9 ರಿಂದ ಮೇ 27 ರವರೆಗೆ ಈ ರೈಲುಗಳಲ್ಲಿ ಒಟ್ಟು 80 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ಮಾಹಿತಿ ನೀಡಿದೆ. ಕಳೆದ ಬುಧವಾರ ಒಂದೇ ದಿನ ಶ್ರಮಿಕ ಎಕ್ಸೆಎಪ್ರೆಸ್ ರೈಲುಗಳಲ್ಲಿ ಒಂಭತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ರೈಲ್ವೆ ಇಲಾಖೆ ಮೃತಪಟ್ಟವರೆಲ್ಲರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯಲೆಂದೇ ವಿವಿಧ ನಗರಗಳಿಗೆ ತೆರಳಿದ್ದರು. ರೈಲು ಸಂಚಾರ ಆರಂಭವಾದ್ದರಿಂದಷ್ಟೇ ಅವರಿಗೆ ತಮ್ಮೂರಿಗೆ ತೆರಳಲು ಸಾಧ್ಯವಾಗಿತ್ತು ಎಂದು ತಿಳಿಸಿತ್ತು. ಇದೇ ಮೊದಲ ಬಾರಿಗೆ ರೈಲುಗಳಲ್ಲಿ ಸಂಭವಿಸಿದ ಮರಣದ ಬಗ್ಗೆ ಇಲಾಖೆ ಇಷ್ಟೊಂದು ವಿವರವಾಗಿ ಮಾಹಿತಿ ಕಲೆ ಹಾಕಿತ್ತು ಎನ್ನಲಾಗಿದೆ.
ಶ್ರಮಿಕ ರೈಲುಗಳಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ..?

Please follow and like us: