ಸಾಮಾಜಿಕ ಅಂತರಕ್ಕಾಗಿ ವಿಶೇಷ ಟೋಪಿ ಧರಿಸಿದ ಶಾಲಾ ಮಕ್ಕಳು

ಬೀಜಿಂಗ್: ಮೂರು ತಿಂಗಳ ಅವಧಿಯ ಸುದೀರ್ಘ ಲಾಕ್‌ಡೌನ್ ಮುಗಿಸಿ ಚೀನಾದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸ ಮಾಡಲಾದ ‘ಒಂದು ಮೀಟರ್ ಟೋಪಿ’ಗಳನ್ನು ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ. ಈ ಟೋಪಿಗಳನ್ನು ಕಾರ್ಡ್ಬೋರ್ಡ್ ಶೀಟ್, ಕಡ್ಡಿಗಳನ್ನು ಬಳಸಿ ಮಾಡಲಾಗಿವೆ. ಟೋಪಿಯ ಎರಡೂ ತುದಿಯಲ್ಲಿ ಉದ್ದದ ಕಡ್ಡಿಗಳನ್ನು ಸಿಕ್ಕಿಸಲಾಗಿದ್ದು, ಇದು ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಇಂತಹ ವಿಚಿತ್ರ ವಿನ್ಯಾಸದ ಟೋಪಿಗಳನ್ನು ತೊಟ್ಟು ಮಕ್ಕಳು ಶಾಲೆಯಲ್ಲಿ ಕುಳಿತಿರುವ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟೋಪಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಅದರಲ್ಲಿ ಎಲೀನ್ ಚೆಂಗ್ಯುನ್ ಚೌ ಎನ್ನುವವರು, ಚೀನಾದಲ್ಲಿ ಸಾಂಗ್ ರಾಜವಂಶಸ್ಥರು ಬಳಸುತ್ತಿದ್ದ ಟೋಪಿಗಳೊಂದಿಗೆ ಮಕ್ಕಳ ಟೋಪಿಗಳನ್ನು ಹೋಲಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸ್ಯಾನಿಟೈಸರ್, ಸೋಪ್ ಇಲ್ಲಾ ಅಂದ್ರೆ ದಂಡವೇ ಔಷಧ...!

Wed Apr 29 , 2020
ತಿರುವನಂತಪುರಂ (ಕೇರಳ): ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ ದಂಡ ಬೀಳೋದು ಗ್ಯಾರೆಂಟಿ. ಆದರೆ ಕೇರಳದ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವೈನಾಡುವಿನ ಅಂಗಡಿಗಳಲ್ಲಿ ಸೋಪ್ ಹಾಗೂ ಸ್ಯಾನಿಟೈಸರ್ ಇಲ್ಲದೇ ಇದ್ದರೆ ದಂಡ ಹಾಕುವುದಾಗಿ ಅಲ್ಲಿನ ಎಸ್‌ಪಿ ಆರ್.ಇಳಂಗೋ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಧರಿಸಿದೇ ಇದ್ದರೆ ೫ ಸಾವಿರ ರೂಪಾಯಿ ಹಾಗೂ ಅಂಗಡಿಗಳಲ್ಲಿ ಸೋಪು, ಸ್ಯಾನಿಟೈಸರ್ ಇಡದೇ ಇದ್ದರೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಜಿಲ್ಲಾಡಳಿತ […]

Advertisement

Wordpress Social Share Plugin powered by Ultimatelysocial