ಸೀರಿಯಲ್ ಶೂಟಿಂಗ್ ಗೆ ಅನುಮತಿ..!

ಲಾಕ್ ಡೌನ್ ಹಿನ್ನೆಲೆ ಸ್ಥಗಿತವಾಗಿರುವ ಸಿರೀಯಲ್ ಶೂಟಿಂಗ್ ಮತ್ತೆ ಆರಂಭಿಸುವುದಕ್ಕೆ ಅನುಮತಿ ಸಿಕ್ಕಿದೆ.ಇಂದು ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಸೀರಿಯಲ್ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಸುಮಾರು 45 ದಿನಗಳಿಂದ ಯಾವುದೇ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್ ಆರಂಭವಾಗಿರಲಿಲ್ಲ. ಕೊರೊನಾ ಭೀತಿಯಿಂದ ಮಾರ್ಚ್ 19ರಿಂದ ಕಿರುತೆರೆ, ಬೆಳ್ಳಿತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಮತ್ತೆ ಶೂಟಿಂಗ್ ಫ್ರಾರಂಬಿಸಲು ಅನುಮತಿ ನೀಡಬೇಕು ಎಂದು ಟಿ.ವಿ.ಅಸೋಶಿಯೇಷನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಕುರಿತು ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಚಿವ ರ್.ಅಶೋಕ್ , ಸಚಿವ ಸಿ.ಟಿ.ರವಿ ಜೊತೆ ಸಭೆ ನಡೆಸಿ, ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ನಿನ್ನೆ ಬಾರ್ ಬಾಗಿಲು ತೆಗೆಯಲು ಅವಕಾಶ ನೀಡಿತ್ತು. ಈ ಬೆನ್ನಲ್ಲೇ ಚಿತ್ರೀಕರಣ ಆರಂಭಕ್ಕೂ ಅನುಮತಿ ನೀಡಿದೆ. ಮನೆಯೊಳಗಿನ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದೂ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ಸೀರಿಯಲ್ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ರು.

ಸೀರಿಯಲ್ ಹಳೆಯ ಎಪಿಸೋಡಗಳನ್ನೇ ಮರು ಪ್ರಸಾರ

ಲಾಕ್ ಡೌನನಿಂದ ಚಿತ್ರೀಕರಣ ಬಂದ್ ಆಗಿದ್ದರಿಂದ ಕೆಲ ಟಿವಿ ವಾಹಿನಿಗಳು ಹಳೆಯ ಎಪಿಸೋಡ್ ಗಳನ್ನೇ ಮರು ಪ್ರಸಾರ ಮಾಡಿದ್ವು. ಹಾಗೇಯೇ ಚಂದನ ಟಿವಿಯಲ್ಲಿ ಪ್ರಸಾರ ಮಾಡಲಾಗಿದ್ದ ರಾಮಾಯಣ, ಮಹಾಭಾರತ ಸೀರಿತಯಲ್ ಗಳು ಭಾರೀ ಯಶಸ್ಸು ಕಂಡಿದ್ದವು. ಅಲ್ಲದೇ ದಾಖಲೆಯ ವೀಕ್ಷಣೆ ಮಾಡಲಾಗಿತ್ತು.ಇನ್ನು ಹಲವಾರು ಸೀರಿಯಲ್ ಗಳು ಅರ್ಧಕ್ಕೆ ನಿಂತಿರುವುದರಿಂದ ನಿರ್ಮಾಪಕರ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಸಿನಿಮಾ ಮತ್ತು ಸೀರಿಯಲ್ ನಿರ್ಮಾಣಕ್ಕೆಂದು ತಂದ ಸಾಲದ ಬಡ್ಡಿಯ ಮೊತ್ತವು ಹೆಚ್ಚಾಗುತ್ತಲೇ ಇದೆ. ಅಲ್ಲದೇ ದಿನನಿತ್ಯ ಕೆಲಸ ಮಾಡುವ ಕಾರ್ಮಿಕರ ಪಾಡು ಹೇಳಿಕೊಳ್ಳಲಾಗುತ್ತಿಲ್ಲ ಎಂದು ನಿರ್ಮಾಪಕರೊಬ್ಬರು ಹೇಳಿದ್ರು.

 

Please follow and like us:

Leave a Reply

Your email address will not be published. Required fields are marked *

Next Post

ತಂಬಾಕು ಉತ್ಪನ್ನಗಳ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

Tue May 5 , 2020
ನವದೆಹಲಿ: ತಜ್ಞರ ಪ್ರಕಾರ, ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಸುಮಾರು ೧೨ ಲಕ್ಷ ಸಾವುಗಳು ಸಂಭವಿಸುತ್ತವೆ. ಅಲ್ಲದೆ, ೫೦ ಪ್ರತಿಶತ ಕ್ಯಾನ್ಸರ್‌ಗೆ ಹಾಗೂ ೯೦ ಪ್ರತಿಶತದಷ್ಟು ಬಾಯಿ ಕ್ಯಾನ್ಸರ್‌ಗೆ ಈ ತಂಬಾಕು ಕಾರಣವಾಗಿದೆ. ಆದ ಕಾರಣ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಆರೋಗ್ಯ ಸಂಬಂಧ ಎಚ್ಚರಿಕೆಯ ಹೊಸ ಚಿತ್ರವನ್ನು ಮುದ್ರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಈ ವರ್ಷ ಸೆಪ್ಟೆಂಬರ್ ೧ ರ ನಂತರ ಮೊದಲು ಸೂಚಿಸಿದ […]

Related posts

Advertisement

Wordpress Social Share Plugin powered by Ultimatelysocial