ಸಿನಿ ಕಾಮಿಕರಿಗೆ ಸಹಾಯ ಹಸ್ತ ಚಾಚಿದ ಆಲ್ ಇಂಡಿಯನ್ ಫಿಲಂ ಮೇಕರ್ಸ್ ಅಸೋಶಿಯೇಷನ್ ಸಂಸ್ಥೆ

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಚಿತ್ರೋದ್ಯಮದ ನಟ, ನಟಿಯರು ಮನೆಯಲ್ಲಿ ಸಿಲ್‌ಡೌನ್ ಆಗಿದ್ದಾರೆ. ಹೀಗಾಗಿಯೇ ಆಲ್ ಇಂಡಿಯನ್ ಫಿಲಂ ಮೇಕರ್ಸ್ ಅಸೋಶಿಯೇಷನ್ ಸಂಸ್ಥೆಯ ವತಿಯಿಂದ ಚಲನಚಿತ್ರ ಕಲಾವಿದರು ಮತ್ತು ಸಿನಿಮಾ ತಾಂತ್ರಿಕ ವರ್ಗದ ಸಿನಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲಾಯಿತು.  ಕೊರೊನಾ ಎಂಬ ವೈರಸ್‌ನಿಂದ ನಗರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಸಿನಿರಂಗ ಸ್ತಬ್ಧವಾಗಿದೆ. ಹಾಗಾಗಿ ಹಸಿದ ಕಲಾವಿದರಿಗೆ ಆಹಾರ ವಿತರಣೆ ಮಾಡುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಲಾವಿದರಿಗೆ ಶಿವರಾಜ್ ಮುತ್ತಣ್ಣವರ್ ಅವರ ಕ್ಷೇತ್ರದಲ್ಲಿ ನೂರಾರು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಮೈಸೂರಿನಲ್ಲಿಯೂ ಪರಮ್ ಗೆಳೆಯರ ಬಳಗದಿಂದ ಶಾಸಕ ರಾಮದಾಸ್ ಅವರಿಂದ ಸಹ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ.
ಬೆಂಗಳೂರಿನ ರಾಜಾಜಿನಗರದ ಮೈಸೂರು ಸ್ಕೆöÊ ಲೈನ್ ಫಿಲಂ ಸ್ಟುಡಿಯೋದಲ್ಲಿ ಸುಮಾರು ೬೦೦ ಜನರಿಗೆ ಆಹಾರ ವಿತರಣೆ ಮಾಡಿ ಸಹಾಯ ಹಸ್ತ ನೀಡಿದೆ. ಸಂಸ್ಥೆಯ ಸದಸ್ಯರು ಪ್ರತಿ ಕಡೆಗಳಿಂದಲೂ ತಮ್ಮ ಸ್ವಂತ ವಾಹನದಲ್ಲಿ ಆಹಾರ ಶೇಖರಣೆ ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದ ಪರಮ್ ಗುಬ್ಬಿ, ಮಂಜುನಾಥ ಭಟ್,ವಿಶು ಆಚಾರ್, ಶಿವರಾಜ್ ಮುತ್ತಣ್ಣನವರ್, ದಿಲೀಪ್ ಕುಮಾರ್, ಶ್ರೀನಿವಾಸ್ ಗೌಡ, ಡೇವಿಡ್ ರಾಯಪ್ಪ ಹಾಗೂ ಪ್ರಿನ್ಸ್ ಸೀನು ಭಾಗಿಯಾಗಿದ್ದಾರೆ.
ದಿಲೀಪ್ ಮತ್ತು ಪರಮ್ ಭಾರತ ಸರ್ಕಾರದ ಅನುಮತಿಯೊಂದಿಗೆ ಹೈದ್ರಾಬಾದ್ ಮೂಲದಿಂದ ಒಡನಾಟವಿಟ್ಟುಕೊಂಡು ಆಯ್.ಎಫ್.ಎಮ್.ಎ. ಸಂಸ್ಥೆಯನ್ನು ಹುಟ್ಟು ಹಾಕಿದರು. ಪ್ರಾರಂಭದಿAದಲೇ ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು,ನಟ,ನಟಿಯರು, ಛಾಯಾಗ್ರಾಹಕರು, ಸಂಕಲನಕಾರರು,ಸಾಹಿತಿಗಳ, ಸಂಗೀತಗಾರರ ಮತ್ತು ಹಲವು ವಿಭಾಗದಲ್ಲಿ ಶ್ರಮಜೀವಿಗಳ ಸಿನಿಕಾರ್ಮಿಕರ ವಿಶ್ವಾಸಗಳಿಸಿ ಅವರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಅವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಷ್ಟ ತಗ್ಗಿಸಲು ಹೋಟಲ್ ಉದ್ಯಮಿಗಳ ಸರ್ಕಸ್

Fri May 1 , 2020
ಚೆನ್ನೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಉಂಟಾದ ಪರಿಣಾಮದಿಂದ ಹೊರಬರಲು ಹೋಟೆಲ್ ಉದ್ಯಮವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ವೇತನ ಕಡಿತ ಮಾಡಿ ಕಡಿಮೆ ಸಿಬ್ಬಂದಿಯನ್ನು ಕರ್ತವ್ಯದಲ್ಲಿರಿಸಲಾಗಿದೆ. ಚೆನ್ನೈನಲ್ಲಿ ಭಾಗಶಃ ಆತಿಥ್ಯ ಉದ್ಯಮವು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಉದ್ಯಮವನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕೆಲ ಹೋಟೆಲ್‌ಗಳು ಹೊಸ ಅತಿಥಿಗಳನ್ನು ಸ್ವಾಗತಿಸದಿರಲು ನಿರ್ಧರಿಸಿದ್ದರೆ, ಇನ್ನೂ ಕೆಲ ಉದ್ಯಮಿಗಳು ನೈರ್ಮಲ್ಯ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಹ್ಯಾಂಡ್‌ಶೇಕ್ ಬದಲಿಗೆ ಹೊಸ ರೀತಿಯ […]

Advertisement

Wordpress Social Share Plugin powered by Ultimatelysocial