ಸೋಂಕು ನಿವಾರಕ ಸಿಂಪಡಣೆ ಅಪಾಯಕಾರಿ

 

ನವದೆಹಲಿ: ರಾಸಾಯನಿಕ ಸೋಂಕು ನಿವಾರಕಗಳ ಸಿಂಪಡಣೆಯಿಂದ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾಗಬಹುದು ಎಂದು ಕೇಂದ್ರ ಆರೋಗ್ಯ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಕೋರೊನಾ ತಡೆಗಟ್ಟುವ ಉದ್ದೇಶದಿಂದ ದೇಶದ ಅನೇಕ ಪ್ರದೇಶಗಳ ತರಕಾರಿ ಮಾರುಕಟ್ಟೆ, ಸರಕಾರಿ ಆಸ್ಪತ್ರೆಗಳಲ್ಲಿ ರೋಗನಿರೋಧಕ ಸುರಂಗಗಳನ್ನು ಸ್ಥಾಪಿಸಿರುವ ಸಂದರ್ಭದಲ್ಲಿ ಸಚಿವಾಲಯ ಈ ಎಚ್ಚರಿಕೆ ನೀಡಿದೆ. ಈ ರೀತಿಯಾಗಿ ಸೋಂಕು ನಿವಾರಕಗಳ ಸಿಂಪಡಣೆ ಮಾಡುವುದರಿಂದ ಜನರಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎನ್ನುವ ತಪ್ಪು ಕಲ್ಪನೆಯನ್ನು ಮೂಡಿಸುತ್ತದೆ. ಹೀಗಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಿಂದಾಗ್ಗೆ ಕೈತೊಳೆಯುವ ಅಭ್ಯಾಸವನ್ನು ಬಿಡುತ್ತಾರೆ ಎಂದು ಸಚಿವಾಲಯ ತಿಳಿಸಿದೆ. ಹಲವು ಜಿಲ್ಲಾಡಳಿತಗಳು, ಸ್ಥಳೀಯ ಜನಪ್ರತಿನಿಧಿಗಳು ಇಂಥ ಸುರಂಗಗಳನ್ನು ಸ್ಥಾಪಿಸಿ ಸೋಡಿಯಂ ಹೈಪೊಕ್ಲೋರೈಟ್ ರಾಸಾಯನಿಕವನ್ನು ಸಿಂಪಡಿಸುತ್ತಿದ್ದಾರೆ. ಇಂಥ ದ್ರಾವಣವನ್ನು ಕೇವಲ ನಿರ್ಜೀವ ವಸ್ತುಗಳ ಮೇಲಷ್ಟೇ ಸಿಂಪಡಿಸಬೇಕು. ಕೊವಿಡ್ ಸೋಂಕಿತರು ಅಥವಾ ಶಂಕಿತರು ಮುಟ್ಟಿದ ವಸ್ತುಗಳು ಹಾಗೂ ನೆಸೆರುವ ಜಾಗವನ್ನು ಸ್ವಚ್ಛಗೊಳಿಸಲಷ್ಟೇ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಲ್ಲಿ ಚಿಕಿತ್ಸೆಗೆ ವಿಶೇಷ ರೋಬೋ

Tue Apr 21 , 2020
ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಅಗತ್ಯ ಸೇವೆ ಸಲ್ಲಿಸಲು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ರೋಬೋಗಳನ್ನ ತಯಾರಿಸಲು ಮುಂದಾಗಿದೆ. ಕೊರೊನಾ ಸೋಂಕಿತರೊಂದಿಗೆ ವೈದ್ಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರು ಪದೇ ಪದೇ ಸಂಪರ್ಕ ಹೊಂದುವುದರಿಂದ ಅವರಿಗೂ ಸೋಂಕು ತಗುಲುವ ಸಾಧ್ಯತೆಯಿದೆ. ಹೀಗಾಗಿ, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಿಶೇಷ ವಾರ್ಡ್ಗಳಲ್ಲಿ, ಪ್ರಾಥಮಿಕ ಉಪಚಾರ ಹಾಗೂ ಆರೈಕೆಗೆ ಈ ರೋಬೋಗಳನ್ನು ಬಳಸಬಹುದು ಎಂದು ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು […]

Advertisement

Wordpress Social Share Plugin powered by Ultimatelysocial