ಹಳ್ಳಿ ಸೊಗಡಿನಲ್ಲಿ ಬರ್ತಿದಾನೆ ಶೋಕಿವಾಲ

ಮನುಷ್ಯ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ ಎಂಬುದನ್ನು ಮತ್ತೇ ಸಾಬೀತುಪಡಿಸಿದೆ ಈ ಚಿತ್ರ ತಂಡ. ಲಾಕ್‌ಡೌನ್ ನಡುವೆಯೂ ತಮ್ಮ ಕೆಲಸಗಳನ್ನು ಪ್ರಾರಂಭಿಸಿ ಸದ್ಯದಲ್ಲೇ ಶೋಕಿ ಮಾಡಕೊಂಡು ತೆರೆಗೆ ಬರಲು ಸಿದ್ಧವಾಗಿದೆ. ಆ ಸಿನಿಮಾ ಯಾವುದಪ್ಪಾ ಅಂತ ತೋರಿಸ್ತಿವಿ ನೋಡಿ.
ಸದಾ ಹುಮ್ಮಸ್ಸಿನೊಂದಿಗೆ ಕೆಲಸ ಮಾಡುತ್ತಿರುವ ಶೋಕಿವಾಲ ಚಿತ್ರತಂಡ ಕುಂಬಳಕಾಯಿ ಹೊಡೆದು ಸದ್ದಿಲ್ಲದೆಯೇ ಡಬ್ಬಿಂಗ್ ಕೆಲಸ ಮುಗಿಸಿಕೊಂಡಿದ್ದಾರೆ. ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಸಿನಿಮಾವನ್ನು ನೋಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ. ಜಾಕಿ ನರ‍್ದೇಶನದ ಶೋಕಿವಾಲ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ, ಡಬ್ಬಿಂಗ್ ಕೆಲಸವನ್ನು ಪರ‍್ತಿಯಾಗಿ ಮುಗಿಸಿದ್ದೆವೆ. ಇನ್ನೂಳಿದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನೆಡೆಯುತ್ತಿವೆ. ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್ ಇಬ್ಬರೂ ಸಿನಿಮಾದಲ್ಲಿ ತುಂಬ ಚೆನ್ನಾಗಿ ನಟಿಸಿದ್ದಾರೆ.
ಶೋಕಿವಾಲ ಚಿತ್ರದಲ್ಲಿ ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮರ‍್ತಿ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿ ನಟಿಸಿದ್ದಾರೆ .ಡಬ್ಬಿಂಗ್ ಕೂಡ ಮುಗ್ತಾಯವಾಗಿದೆ. ನನ್ನ ಪ್ರಥಮ ಪ್ರಯತ್ನಕ್ಕೆ ಎಲ್ಲರ ಸಹಕಾರ ಸಿಕ್ಕಿದೆ. ಮುಂದೆಯೂ ಸಿಗುವುದಕ್ಕೆ ಸಹಕರಿಸಿ ಎಂದು ಯುವ ನರ‍್ದೇಶಕ ಜಾಕಿ (ತಿಮ್ಮೇಗೌಡ) ಕೇಳಿಕೊಂಡರು.
ಮೊದಲ ಬಾರಿ ಅಜಯ್ ರಾವ್ ಹಳ್ಳಿ ಹುಡುಗಾನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಮೊದಲ ಪ್ರಯತ್ನವಾಗಿದ್ದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಹುಡುಗಿಯರ ಹಿಂದೆ ಬೀಳುವ ಪೋಲಿಯಾಗಿ… ಲವ್ ಮಾಡಿ ಮದುವೆಯಾಗ್ಬೇಕು ಎಂಬುದು ಇವನ ಆಸೆ. ಹುಡುಗಿಯರಿಗಾಗಿಯೇ ಹುಟ್ಟಿದ ಶೋಕಿವಾಲ ಎಂದರೆ ತಪ್ಪಾಗಲಾರದು…
ಸಂಜನ ಆನಂದ್ ಕೂಡ ಮೊದಲ ಬಾರಿ ಹಳ್ಳಿ ಹುಡುಗಿಯಾಗಿ ನಟಿಸಿದ್ದು ಅವರಿಗೆ ತುಂಬಾ ಖುಷಿಯಿದೆ. ಗೌಡರ ಮುದ್ದಿನ ಮಗಳಾಗಿ, ಪಡ್ಡೆ ಹುಡುಗರ ಮುದ್ದಿನ ಹುಡುಗಿಯಾಗಿದ್ದಾರೆ. ನಾಯಕನ ಕಣ್ಣಿಗೆ ಬಿದ್ದ ನಂತರ ನಾಯಕ-ನಾಯಕಿಯ ಕಿತ್ತಾಟ, ನಾಯಕಿಯ ಹಿಂದೆ ನಾಯಕನ ಅಲೆದಾಟ, ನಾಯಕಿಯ ಪ್ರೀತಿಗಾಗಿ ಗುದ್ದಾಟ ಎಲ್ಲವು ಇದ್ದು ಹೇಗೆ ನಾಯಕಿಯನ್ನು ಪ್ರೀತಿಯಲ್ಲಿ ಬೀಳಿಸುತ್ತಾನೆ, ಪ್ರೀತಿಯಾದ ಮೇಲೆ ನಾಯಕನ ಶೋಕಿ ಏನೆಂಬುದೆ ಚಿತ್ರದ ಕಥೆಯಾಗಿದೆಯoತೆ.
ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿಯಂತರ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ತುಂಬಾ ಸಹಕರಿಸಿದ್ದಾರೆ .ಕೊನೆಯ ಭಾಗದ ಚಿತ್ರೀಕರಣವನ್ನು ಮದ್ದೂರಿನ ಬಳಿ ತೈಲೂರಿನಲ್ಲಿ ಮುಗಿಸುತ್ತಾ ಅದೇ ಜಾಗದಲ್ಲಿ ಕುಂಬಳಕಾಯಿ ಹೊಡೆದಿದ್ದೇವೆ ಎಂದು ಹೇಳುತ್ತಾರೆ ನಿರ್ದೇಶಕ ಜಾಕಿ.
ಚಿತ್ರಕ್ಕೆ ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು ೪ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದ ಹಾಡುಗಳನ್ನು ಟoಛಿಞಜoತಿಟಿ ಮುಗಿದ ಮೇಲೆ ಬಿಡುಗಡೆ ಮಾಡುತ್ತೇವೆ .ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ಶೋಕಿವಾಲನಿಗಿದೆ.ಬಾಲುಕುಮಟ ರವರ ಮೇಲ್ವಿಚಾರಣೆ ಹೀಗೆ ಎಲ್ಲ ಣeಛಿhಟಿiಛಿiಚಿಟಿ ರವರ suಠಿಠಿoಡಿಣನಿಂದ ಶೋಕಿವಾಲ ಚೆನ್ನಾಗಿ ಮೂಡಿ ಬಂದಿದೆಯoತೆ.ಮೈಸೂರು ಮೂಲದ ಯಶಸ್ವಿ ನರ‍್ಮಾಪಕ ಟಿ .ಆರ್. ಚಂದ್ರಶೇಖರ್ ನರ‍್ಮಾಣದ ಈ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ಸಾಲು ಸಾಲಾಗಿ ಚಿತ್ರ ನರ‍್ಮಿಸುತ್ತಿರುವ ಸರಣಿ ನರ‍್ಮಾಪಕ ಎಂದರೆ ಅದು ಟಿ. ಆರ್. ಚಂದ್ರಶೇಖರ್ ಅವರೇ. ಎಲ್ಲಾ ಅಂದುಕೊಂಡಂತೆ ಆದರೆ ಅದಷ್ಟು ಬೇಗ ಚಿತ್ರಮಂದಿರಕ್ಕೆ ಶೋಕಿವಾಲ ನನ್ನು ಕರೆತರಲು ಚಿತ್ರತಂಡ ರೆಡಿಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ನಟಿ ವಿದ್ಯಾ ಬಾಲನ್ ಸಹಾಯ ಹಸ್ತ

Wed Apr 29 , 2020
ದೇಶದಾದ್ಯಂತ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವವರಿಗೆ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್ ನಟಿ ವಿದ್ಯಾ ಬಾಲನ್ ವಿಭಿನ್ನವಾಗಿ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ವೈದ್ಯರಿಗೆ ೨,೫೦೦ ಪಿಪಿಇ ಕಿಟ್‌ಗಳ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ಗೆ ೧೬ ಲಕ್ಷ ರೂಪಾಯಿ ನೀಡುತ್ತಿದ್ದಾರೆ.  ದೇಣಿಗೆ ಸಂಗ್ರಹಿಸುವ ಮೂಲಕ ವಿದ್ಯಾ ಬಾಲನ್ ಹಣ ಸಂಗ್ರಹಿಸಿದ್ದಾರೆ. ಇವರ ಈ ಕಾಯಕ ಹೀಗೆ ಮುಂದುವರೆಯಲಿ. ಇವರಿಗೆ ದೃಶ್ಯಂ ಫಿಲಂಸ್ ಸಂಸ್ಥೆಯ ನಿರ್ಮಾತೃ […]

Advertisement

Wordpress Social Share Plugin powered by Ultimatelysocial