ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

 

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ.ಆದ್ದರಿಂದ ಹಲವರು ಮೊಡವೆಗಳ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ.ಅವುಗಳು ತಾತ್ಕಾಲಿಕ ಪರಿಹಾರ ನೀಡಿದರೂ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಆದ್ದರಿಂದ ಮನೆಮದ್ದನ್ನು ಟ್ರೈಮಾಡಿ. ಪರಿಣಾಮ ನಿಧಾನವಾದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

* ಪ್ರತಿದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು.

* ಪ್ರತಿದಿನ ತಪ್ಪದೆ ಆರರಿಂದ ಎಂಟು ಬಾರಿ ಮುಖವನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು.

* ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬಳಸಬೇಕು.

* ಪುದೀನಾ ಎಲೆಯ ರಸವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯಬೇಕು.

* ಅರಿಶಿಣ ಪುಡಿ, ಪಪ್ಪಾಯ ಹಣ್ಣು, ಸವತೆಕಾಯಿ, ಕ್ಯಾರೆಟ್, ಟೊಮೆಟೊ, ಜೇನುತುಪ್ಪ ಇವುಗಳ ಫೇಸ್ ಪ್ಯಾಕ್ ಬಳಸಬೇಕು.

* ಆಲೀವ್ ಎಣ್ಣೆಯನ್ನು ಮುಖಕ್ಕೆ ಮರ್ದನ ಮಾಡಿ 20 ನಿಮಿಷಗಳ ನಂತರ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.

* ಕಲ್ಲಂಗಡಿ ರಸ, ಕ್ಯಾರೆಟ್ ರಸ, ಬಾಳೆ ಹಣ್ಣಿನ ರಸವನ್ನು ಐಸ್ ಮಾಡುವ ಟ್ರೇ ನಲ್ಲಿ ಇರಿಸಿ ಐಸ್ ಕ್ಯೂಬ್ ಮಾಡಿಕೊಳ್ಳಬೇಕು. ಈ ಹಣ್ಣಿನ ರಸದ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಮೊಡವೆ ನಿಯಂತ್ರಣದಲ್ಲಿರುತ್ತದೆ.

* ನಿಂಬೆ ರಸ ಅಥವಾ ಜೇನುತುಪ್ಪ ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು.

* ಚಂದನ ಪುಡಿಯನ್ನು ಗುಲಾಬಿ ನೀರಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ತೆಳುವಾಗಿ ಲೇಪನ ಮಾಡಿ ಬೆಳಗ್ಗೆ ಎದ್ದು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುನೀತ್ ರಾಜ್ ಕುಮಾರ್ :ಪವರ್ ಸ್ಟಾರ್ ಆರ್ಮಿ ಆಫೀಸರ್ ಲುಕ್ ವೈರಲ್;

Thu Jan 27 , 2022
ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಭರ್ಜರಿ ಮತ್ತು ಬಹದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರವು ನಟ ತನ್ನ ಅಕಾಲಿಕ ಮರಣದ ಮೊದಲು ಚಿತ್ರೀಕರಿಸಿದ ಕೊನೆಯ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸೇನಾಧಿಕಾರಿಯ ಪಾತ್ರವನ್ನು ನೋಡುತ್ತಾರೆ. ಗಣರಾಜ್ಯೋತ್ಸವದಂದು ಅಭಿಮಾನಿಗಳಿಗೆ ವಿಶೇಷ ಉಪಚಾರವಾಗಿ ಸೇನಾಧಿಕಾರಿಯಾಗಿ ಅವರ ಲುಕ್‌ನ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಎಲ್ಲರ ಹುಬ್ಬೇರುವಂತೆ […]

Advertisement

Wordpress Social Share Plugin powered by Ultimatelysocial