ಅಂಫಾನ್ ಅಬ್ಬರ/ಇದರಿಂದ ಆದ ನಷ್ಟಗಳೇನು?

ಅಂಫಾನ್ ಚಂಡಮಾರುತದಿAದ ಪಶ್ಚಿಮ ಬಂಗಾಳಕ್ಕೆ ಸುಮಾರು ೧ ಕೋಟಿ ನಷ್ಟವಾಗಿದೆ ಎಂದು ಕೇಂದ್ರ ರ‍್ಕಾರಕ್ಕೆ ಪಶ್ಚಿಮ ಬಂಗಾಳದ ರ‍್ಕಾರ ಮಾಹಿತಿ ನೀಡಿದೆ. ಅಂಫಾನ್ ಚಂಡಮಾರುತದಿಂದಾಗಿ ಒಟ್ಟು ೧,೦೨,೪೨೨ ಕೋಟಿ ರೂ. ನಷ್ಟವಾಗಿದೆ. ಮನೆಗಳಿಗೆ ಆದ ಹಾನಿಯಾಗಿ ೨೮.೫೬ ಕೋಟಿ ರೂ. ನಷ್ಟ ಸಂಭವಿಸಿದೆ. ಕೃಷಿ ಕ್ಷೇತ್ರಕ್ಕೆ ೧೫,೮೬೦ ಕೋಟಿ ರೂ. ನಷ್ಟ ಉಂಟಾಗಿದೆ, ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸೇರಿದಂತೆ ಕೈಗಾರಿಕಾ ವಲಯಕ್ಕೆ ೨೬,೭೯೦ ಕೋಟಿ ರೂ. ನಷ್ಟವಾಗಿದೆ, ಮೀನುಗಾರಿಕೆಗೆ ೨ ಸಾವಿರ ಕೋಟಿ, ತೋಟಗಾರಿಕೆಗೆ ೬೫೮೧ ಕೋಟಿ, ಪ್ರಾಣಿ ಮತ್ತು ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ೪೫೨ ಕೋಟಿ, ನಗರ ಮೂಲಸೌರ‍್ಯ ಕ್ಷೇತ್ರಕ್ಕೆ ೬೭೫೦ ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ರ‍್ಕಾರ ಕೇಂದ್ರ ಸಮಿತಿಗೆ ವರದಿ ಸಲ್ಲಿಸಿದೆ. ಚಂಡಮಾರುತದಿಂದಾಗಿ ಸಂಭವಿಸಿರುವ ಹಾನಿಯ ಬಗ್ಗೆ ಕೇಂದ್ರ ರ‍್ಕಾರದ ಅಂತರ ಸಚಿವಾಲಯ ಸಮಿತಿಯು ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಸಮೀಕ್ಷೆ ನಡೆಸುತ್ತಿದೆ. ನಷ್ಟದ ಪ್ರಮಾಣದ ವರದಿ ಪಟ್ಟಿಯನ್ನು ಕೇಂದ್ರದ ತಂಡಕ್ಕೆ ನೀಡಲಾಗಿದೆ ಮತ್ತು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದ್ದು, ತರ‍್ತು ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

 ಸ್ಯಾಂಡಲ್ ವುಡ್  ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

Sun Jun 7 , 2020
ಸ್ಯಾಂಡಲ್ ವುಡ್ ನಟ ಚಿರಂಜೀವಿ ರ‍್ಜಾ (೩೯ ರ‍್ಷ) ಇಹಲೋಕವನ್ನು ತ್ಯೆಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ರ‍್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದಲೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿ ರ‍್ಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕನ್ನಡ ಖ್ಯಾತ ನಟರಾಗಿರುವ ಚಿರಂಜೀವಿ ರ‍್ಜಾ ವಾಯುಪುತ್ರ, ಗಂಡೆದೆ, ಚಿರು, […]

Advertisement

Wordpress Social Share Plugin powered by Ultimatelysocial