ಅಗ್ರಸ್ಥಾನಕ್ಕೇರಿದ ಡೆಲ್ಲಿ: ಚೆನ್ನೈಗೆ ಮಣ್ಣು ಮುಕ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ ಲೀಗ್ ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ಬಂದಿದ್ದು  ಸಾಕಷ್ಟು ರೋಚಕತೆಯಿಂದ ಕೂಡಿದೆ. ಒಂದೆಡೆ ಪ್ಲೇಆಫ್‌ಗೇರಲು ಕೆಲ ತಂಡಗಳು ಜಿದ್ದಾ ಜಿದ್ದಿಯಿಂದ  ಹೋರಾಡುತ್ತಿದ್ದರೆ ಇನ್ನು ಕೆಲವು  ತಂಡಗಳು ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಶಸ್ಸು ದೊರೆತಿದ್ದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಮಾನ ಅಂಕವನ್ನು ಪಡೆದುಕೊಂಡಿತ್ತು. ಆದರೆ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದ್ದ ಕಾರಣ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ ತಂಡಕ್ಕಿಂತ ಎರಡು ಅಂಕ ಹೆಚ್ಚು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ.

ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ 20 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ 13 ಪಂದ್ಯಗಳನ್ನು ಆಡಿದ್ದು ಇದರಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರು ಪಂದ್ಯದಲ್ಲಿ ಸೋತಿದೆ. ಈ ಮೂಲಕ 20 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಮತ್ತೊಂದೆಡೆ ಸಮ ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ 18 ಅಂಕಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ.

Please follow and like us:

Leave a Reply

Your email address will not be published. Required fields are marked *

Next Post

ಭರ್ಜರಿ 25 ದಿನಗಳ ಬ್ಯಾಟಿಂಗ್‌ ಪೂರೈಸಿದ ಲಂಕೆ - ಅಭಿಮಾನಿಗಳ ಮನಕದ್ದ ಲೂಸ್‌ ಮಾದ ಯೋಗಿ

Tue Oct 5 , 2021
ಲಾಕ್‌ ಡೌನ್‌ ನಿಂದ ಬೇಸತ್ತು ಮನೆಲ್ಲಿ ಕೂತು ಕೂತು ಬೇಸರಗೊಂಡಿದ್ದ ಸಿನಿಪ್ರೀಯರಿಗೆ ಸಿನಿಮಾಗಳು ರಿಲೀಸ್‌ ಆಗಲು ತಯಾರಾಗಿದ್ದಾವೆ ಎಂದು ತಿಳಿದಿದೆ ತಡ ಚಿತ್ರಗಳು  ಬಿಡುಗಡೆಯಾದ ಮೊದಲನೇಯ ದಿನವೇ ಥೀಯೇಟರ್‌ ಫುಲ್‌ ಜಿಗಿ ಜಿಗಿ. ಒಂದ್‌ ಕಡೆ ಕೊರೊನಾ ಹಾವಳಿ ,ಮತ್ತೊಂದು ಕಡೆ 50% ಪ್ರೇಕ್ಷಕರಿಗಷ್ಟೇ ಅನುಮತಿ ಎಲ್ಲವನ್ನು ಸರಿಸಮಾನವಾಗಿ ತೂಗಿಸಬೇಕಾದ ಪರಿಸ್ಥಿತಿ ಸಿನಿಮಾ ತಂಡದ ಮೇಲಿತ್ತು. ಜೀವದ ಭಯ ಯಾರಿಗೆ ಇರೊಲ್ಲಾ ಹೇಳಿ ಸಿನಿಮಾ ಏನು ,ಬದುಕಿದ್ರೆ ನಾಳೆನೂ ನೋಡಬಹುದು […]

Advertisement

Wordpress Social Share Plugin powered by Ultimatelysocial