ಅಧಿಕಾರಿಗಳಿಂದ ಗುಡಿಸಲು ನೆಲಸಮ- ಸಚಿವರ ಕಾಲಿಗೆ ಬಿದ್ದ ಗರ್ಭಿಣಿ

ಗುಡಿಸಲನ್ನು ಅಧಿಕಾರಿಗಳು ಕಿತ್ತು ಹಾಕಿದ್ದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ತುಂಬು ಗರ್ಭಿಣಿ ಬಿದ್ದು ಕಣ್ಣೀರಿಟ್ಟ ಘಟನೆ ರಾಯಚೂರಿನ ಜಿಲ್ಲಾಪಂಚಾಯತ್ ಕಛೇರಿ ಮುಂದೆ ನಡೆದಿದೆ. ೨೦೦೯ರಲ್ಲಿ ಬಂದಿದ್ದ ಕೃಷ್ಣ ನದಿ ಪ್ರವಾಹಕ್ಕೆ ಸೂರು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಕ್ಕೆ ಇಂದಿಗೂ ಆಸರೆ ಒದಗಿಸದ ಅಧಿಕಾರಿಗಳ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಗ್ರಾಮದ ಗರ್ಭಿಣಿ ೨೦೦೯ರ ಸಮಯದಲ್ಲಿ ಪ್ರವಾಹಕ್ಕೆ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ತದನಂತರ ಸರ್ಕಾರ ಸೂರು ಕಳೆದುಕೊಂಡವರಿಗೆ ನಿವೇಶನಗಳನ್ನು ಗುರುತಿಸಿ ನೀಡಿತ್ತೆ ವಿನಃ ಕೆಲವರಿಗೆ ಮನೆಗಳನ್ನು ನೀಡಿರಲಿಲ್ಲ. ವಿಧಿಯಿಲ್ಲದೇ ಸರಕಾರ ಗುರುತಿಸಿದ ಸ್ಥಳದಲ್ಲಿ ಗುಡಿಸಲು ಹಾಕಿ ಬದುಕಿತ್ತಿದ್ದ ಗರ್ಭಿಣಿಗೆ ಕಿರುಕುಳ ನೀಡಿದ ಅಧಿಕಾರಿಗಳು ಎರಡು ದಿನಗಳ ಹಿಂದಷ್ಟೆ ಆಕೆಗೆ ಸೇರಿದ ಗುಡಿಸಲು ಸೇರಿ ಹಲವರ ಗುಡಿಸಲುಗಳನ್ನ ನೆಲಸಮ ಮಾಡಿ ಅಮಾನವೀಯ ಕೃತ್ಯವೆಸಗಿದ್ದರು. ಇಂದು ಜಿಲ್ಲೆಗೆ ಬಂದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡಳು. ಇದರಿಂದ ಅಸಮಧಾನಗೊಂಡ ಮಹಿಳೆಗೆ ಸಾಂತ್ವನ ಹೇಳಿ ಕೂಡಲೇ ಗರ್ಭಿಣಿ ವಾಸಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಚಿವ ಸವದಿ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್‌ಗೆ ಸೂಚಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಮಾಡುವುದೊಂದೆ ಪರಿಹಾರ ಅಲ್ಲ- ಡಿಸಿಎಂ ಲಕ್ಷ್ಮಣ ಸವದಿ

Tue Jun 23 , 2020
ಕೊರೊನಾ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ನಿಗಧಿತ ವೆಚ್ಚಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರನಲ್ಲಿ ಮಾತನಾಡಿದ ಅವರು, ಕೊರೊನಾ ಚಿಕಿತ್ಸೆಗಾಗಿ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವ ಹಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತೆ, ಹಣ ಇರುವವರು ಖಾಸಗಿ ಆಸ್ಪತ್ರೆಗೆ ಹೋಗಬಹುದು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. […]

Advertisement

Wordpress Social Share Plugin powered by Ultimatelysocial